ದೀಪಾವಳಿಗೂ ಇಲ್ಲ ಗೃಹಲಕ್ಷ್ಮೀ ಹಣ

ನಾಲ್ಕು ತಿಂಗಳಿಂದ ಖಾತೆಗೆ ಹಣ ಬಂದಿಲ್ಲ ಎಂದು ಮಹಿಳೆಯರ ದೂರು

ಬೆಂಗಳೂರು: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ 3-4 ತಿಂಗಳಿಂದ ಮಹಿಳೆಯರ ಅಕೌಂಟ್‌ಗೆ ಜಮೆಯಾಗಿಲ್ಲ. ದೀಪಾವಳಿ ಸಮಯದಲ್ಲಾದರೂ ಗೃಹಲಕ್ಷ್ಮೀ ಹಣ ಸಿಗಬಹುದು ಎಂದು ಕಾದಿದ್ದವರಿಗೆ ನಿರಾಸೆಯಾಗಿದೆ. ಸರ್ಕಾರದಿಂದ ಇನ್ನೂ ಹಣ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯೇ ಹೆಚ್ಚು ಜನರನ್ನು ತಲುಪಿತ್ತು. ಮಹಿಳೆಯರ ಮನಗೆದ್ದಿದ್ದ ಈ ಯೋಜನೆ ಈಗ ಕುಂಟಲಾರಂಭಿಸಿದೆ. ಕಳೆದ 4 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಅಕೌಂಟ್‌ಗೆ ಜಮೆಯಾಗಿಲ್ಲ. ಸರ್ಕಾರ ಹಣ ಹಾಕಲು ವಿಳಂಬ ಮಾಡುತ್ತಿದೆ. ಇದು ಗೃಹಲಕ್ಷ್ಮಿ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗ್ತಿದೆ.





















































 
 

ಕಳೆದ 3-4 ತಿಂಗಳಿನಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಸರಿಯಾಗಿ ಹಣ ಜಮಾ ಆಗದೆ ಇರುವುದರಿಂದ ಗೃಹಲಕ್ಷ್ಮಿ ಫಲಾನುಭವಿಗಳು ಬ್ಯಾಂಕ್, ಪೋಸ್ಟ್ ಆಫೀಸ್‌ಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನ ಹರಿಸಿ, ಆದಷ್ಟು ಬೇಗ ಬಾಕಿ ಕಂತಿನ ಹಣ ಬಿಡುಗಡೆ ಮಾಡಿದರೆ ಮಹಿಳೆಯರು ದೀಪಾವಳಿ ಹಬ್ಬವನ್ನು ಖುಷಿಯಿಂದ ಮಾಡಬಹುದು ಎನ್ನುವುದು ಜನರ ಕೋರಿಕೆ.

error: Content is protected !!
Scroll to Top