1.50 ಲಕ್ಷದತ್ತ ಚಿನ್ನದ ಬೆಲೆ : ಬೆಳ್ಳಿ 2 ಲಕ್ಷ ತಲುಪುವ ಸಾಧ್ಯತೆ

ಹಬ್ಬದ ಸಂದರ್ಭದಲ್ಲೇ ಬೆಲೆ ಏರಿಕೆಯ ಬಿಸಿ

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಾಗಾಲೋಟವೂ ಮುಂದುವರಿದಿದೆ. ಚಿನ್ನ 10 ಗ್ರಾಂಗೆ ಈಗಾಗಲೇ 1.20 ಲ.ರೂ. ಆಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದು 1.50 ಲ.ರೂ. ಆಗಬಹುದು ಎನ್ನಲಾಗುತ್ತಿದೆ.

ದೀಪಾವಳಿ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಒಡವೆ ಖರೀದಿಸುವುದು ವಾಡಿಕೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗುತ್ತಿರುವುದರಿಂದ ಜನರು ಚಿನ್ನದಂಗಡಿಗಳತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ.





















































 
 

10 ಗ್ರಾಂ ಚಿನ್ನದ ರೇಟ್ 1 ಲಕ್ಷ ಗಡಿ ದಾಟಿ ಈಗ 1.20 ಲ.ರೂ.ಗೆ ಬಂದು ನಿಂತಿದೆ. ದೀಪಾವಳಿ ವೇಳೆಗಾಗುವಾಗ 1.50 ಲಕ್ಷ ರೂ. ತಲುಪುವ ಸಾಧ್ಯತೆಯಿದೆ. ಇದೇ ವೇಳೆ ಬೆಳ್ಳಿ ಬೆಲೆ ಕೆಜಿಗೆ 2 ಲಕ್ಷ ರೂ. ದಾಟಲಿದೆ ಎನ್ನಲಾಗುತ್ತಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನೀತಿಗಳಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗುತ್ತಿರುವ ಏರಿಳಿತ, ಹೂಡಿಕೆದಾರರು ಡಾಲರ್ ಬದಲು ಚಿನ್ನದ ಖರೀದಿಗೆ ಮುಂದಾಗಿರುವುದು, ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಹೆಚ್ಚಳ, ಕೈಗಾರಿಕೆ ಉದ್ದೇಶಕ್ಕೆ ಬೆಳ್ಳಿ ಬಳಕೆ ಹೆಚ್ಚಳ ಚಿನ್ನ ಮತ್ತು ಬೆಳ್ಳೆ ಬೆಲೆ ತೀವ್ರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

error: Content is protected !!
Scroll to Top