ಬೆಂಗಳೂರಲ್ಲೇ ಇತ್ತು ಸೈಬರ್‌ ಖದೀಮರ ಡಿಜಿಟಲ್‌ ಅರೆಸ್ಟ್‌ ಕಂಪನಿ

ಡಿಜಿಟಲ್‌ ಅರೆಸ್ಟ್‌ ಮಾಡಿ ಕೋಟಿಗಟ್ಟಲೆ ಹಣ ಸುಲಿಯುತ್ತಿದ್ದ ಆಫೀಸ್‌ ಮೇಲೆ ದಾಳಿ

ಬೆಂಗಳೂರು : ದೇಶ ವಿದೇಶಗಳ ಅಮಾಯಕ ಜನರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಕೋಟಿಗಟ್ಟಲೆ ಹಣ ದೋಚುತ್ತಿದ್ದ ಸೈಬರ್‌ ಖದೀಮರ ಕಚೇರಿ ಬೆಂಗಳೂರಿನಲ್ಲೇ ಇತ್ತು ಎಂಬುದು ಈಗ ಬಯಲಾಗಿದೆ. ಹಲವು ಐಟಿ ಕಂಪನಿಗಳಿರುವ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ಕಂಪನಿ ಕೂಡ ಪತ್ತೆಯಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಜನರಲ್ಲಿ ಭಯ ಹುಟ್ಟಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಈ ಕಚೇರಿಗೆ ಜೊತೆಗೆ ನಂಟು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ಮೊದಲ ಬಾರಿ ಭಾರತದಲ್ಲಿ ಕುಳಿತು ಅಮೆರಿಕ ಮತ್ತು ಕೆನಡಾ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಕಚೇರಿಯೊಂದನ್ನು ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನಲ್ಲಿ ಪತ್ತೆ ಹಚ್ಚಲಾಗಿದೆ. ಈ ಕಚೇರಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಅಮೆರಿಕದ ಸುಪ್ರೀಂ ಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯದ ನಕಲಿ ಆದೇಶಗಳನ್ನು ತೋರಿಸಿ ವಿದೇಶಿ ಪ್ರಜೆಗಳಿಗೆ ವಂಚನೆ ಮಾಡಲು
ಎಚ್ಎಸ್ಆರ್ ಲೇಔಟ್‌ನ 24ನೇ ಕ್ರಾಸ್‌ನಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಸಿಬೈಟ್ ಎಂಬ ಐಟಿ ಕಂಪನಿ ತೆರೆದಿತ್ತು. ನಿತ್ಯ ಸಂಜೆ 6 ಗಂಟೆಗೆ ಕಚೇರಿ ಶುರುವಾಗಿ ಅಮೆರಿಕ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅಮೇರಿಕ ಪ್ರಜೆಗಳನ್ನೇ ಟಾರ್ಗೆಟ್ ಮಾಡಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು. ನಾವು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಹಾಗೂ ಇನ್ವೆಸ್ಟಿಗೇಷನ್ ಏಜೆನ್ಸಿಯವರು. ನಿಮ್ಮ ಐಡಿಗಳನ್ನು ಬಳಸಿ ಪಾರ್ಸಲ್ ಬಂದಿದೆ. ಅದರಲ್ಲಿ ನಾರ್ಕೊಟಿಕ್ಸ್ ಪತ್ತೆಯಾಗಿದೆ. ನಿಮ್ಮ ವಿರುದ್ದ ಕೇಸ್ ದಾಖಲಾಗಿದೆ ಎಂದು ಬೆದರಿಸುತ್ತಿದ್ದರು.





















































 
 

ಅದಕ್ಕೆ ತಕ್ಕ ಹಾಗೆ ಅಮೆರಿಕದ ಸುಪ್ರೀಂ ಕೋರ್ಟ್ ಹಾಗೂ ಅಮೆರಿಕ ಜಿಲ್ಲಾ ನ್ಯಾಯಾಲಯದ ನಕಲಿ ಆದೇಶಗಳನ್ನು ತೋರಿಸುತ್ತಿದ್ದರು. ನಂತರ ಕರೆಯನ್ನು ಮತ್ತೊಂದು ಇನ್ವೆಸ್ಟಿಗೇಶನ್ ಟೀಮ್​ಗೆ ವರ್ಗಾಯಿಸುತ್ತೇವೆಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಡಾಲರ್​ಗಳಿಗೆ ಡಿಮಾಂಡ್ ಮಾಡುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

error: Content is protected !!
Scroll to Top