ಕೊಪ್ಪಳ: ಮೆತ್ತಗಲ್ ಗ್ರಾಮದ ಸಮೀಪದಲ್ಲಿ ನಬಾರ್ಡ್ ಮತ್ತು ಗವಿಸಿದ್ದೇಶ್ವರ ರೈತ ಉತ್ಪಾದಕರ ಕಂಪನಿಯ ಸಹಯೋಗದಲ್ಲಿ ಆರಂಭವಾದ ಕೃಷಿ ಸಂಸ್ಕರಣೆ ಮತ್ತು ಸಾಮಾನ್ಯ ಸೌಲಭ್ಯವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟನೆ ಮಾಡಿದ್ದಾರೆ.
ಈ ನೂತನ ಘಟಕದ ಮುಂಭಾಗದಲ್ಲಿ ಕೃಷಿ ಇಲಾಖೆ ಸೇರಿದಂತೆ ಇನ್ನಿತರ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿ ಉತ್ಪನ್ನಗಳನ್ನು ವೀಕ್ಷಣೆ ಮಾಡಿದರು. ಸ್ಥಳೀಯ ಉತ್ಪನ್ನಗಳ ಬಗೆಗೂ ಮಾಹಿತಿ ಪಡೆದುಕೊಂಡರು.

