ಬೆಳಂದೂರು ಸೇರಿದಂತೆ ಕುದ್ಮಾರು, ಕಾಯಿಮಣದಲ್ಲಿ ಗ್ರಾಮವನ್ನು ಹರ್ ಘರ್ ಜಲ್ ಘೋಷಣೆ
ಬೆಳಂದೂರು: ಜಲ ಜೀವನ್ ಮಿಷನ್ ಅಡಿಯಲ್ಲಿ ಕಡಬ ತಾಲ್ಲೂಕಿನ ಬೆಳಂದೂರು ಗ್ರಾಮ ಪಂಚಾಯತಿಯ ಕುದ್ಮಾರು,
ಕಾಯಿಮಣ, ಬೆಳಂದೂರು ವ್ಯಾಪ್ತಿಯ ಗ್ರಾಮವನ್ನು ಶುಕ್ರವಾರದಂದು ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಕಡಬ ಇವರ ಮಾರ್ಗದರ್ಶನದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಕ್ಷಿ ಬಿ ಇವರು ಬೆಳಂದೂರು ಗ್ರಾಮವನ್ನು ಹರ್ ಗರ್ ಜಲ್ ಗ್ರಾಮ ಎಂದು ಘೋಷಣೆ ಮಾಡಿದರು.
ಈ ವೇಳೆ ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಎ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಕೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ನೀರು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿಪಿಎಂ ವಿಜ್ಞೇಶ್ ರಾಜ್, ಇಂಜಿನಿಯರ್ ಸಂಗಪ್ಪ ಎಸ್ ಹುಕ್ಕೇರಿ ಹಾಗೂ ಈಶ್ವರ, ತಂಡದ ನಾಯಕ ಮಿಥುನ್ ಸಹಕರಿಸಿದರು.
























