ಕಾಂಗ್ರೆಸ್ ಯಾವ ದೇಶಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದೆ?: ಬಿ. ವೈ. ವಿಜಯೇಂದ್ರ

ಬೆಂಗಳೂರು: ಅಧಿಕಾರ ಸೃಷ್ಟಿಯ ರಾಜಕಾರಣ ಹೊರತು ಪಡಿಸಿ ಕಾಂಗ್ರೆಸ್ ನಾಯಕರು ಈ ವರೆಗೆ ಯಾವ ದೇಶ ಭಕ್ತ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದೀರಿ ಎಂದು ಆಧಾರ ಸಹಿತ ತಿಳಿಸುವಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ‌ಸವಾಲೊಡ್ಡಿದ್ದಾರೆ.

ಹಿಂದೂ ಸಂಘಟನೆಗಳ ಮೇಲೆ ವಿರೋಧ ವ್ಯಕ್ತಪಡಿಸುವ ನೀವು ಯಾವಾಗಲಾದರೂ ಕೋಮುವಾದಿ ಸಂಘಟನೆಗಳ ಬಗ್ಗೆ, ಉಗ್ರ ಸಂಘಟನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೀರಾ?, ಟೀಕೆ ಮಾಡಿದ್ದೀರಾ?. ನಿಮಗೆ ರಾಷ್ಟ್ರ ಭಕ್ತ ಸಂಘಟನೆಗಳ ಸೇವೆ, ಇತಿಹಾಸ ತಿಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

RSS ಅನ್ನು ಟೀಕೆ ಮಾಡುವುದು ನಿಮ್ಮ ಉದ್ದೇಶ ಅಲ್ಲ. ಬದಲಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ನಿಮ್ಮ ಉದ್ದೇಶ. ನೀವು ಹಿಂದೂ ಧರ್ಮವನ್ನು ಮರೆತು ಬಹಳಷ್ಟು ಸಮಯಗಳೇ ಆಗಿವೆ. ಆದ್ದರಿಂದಲೇ ಹಿಂದೂ ಧರ್ಮದ ಮೇಲೆ ನೀವು ಹಗೆತನ, ದ್ವೇಷ ಸಾಧಿಸುತ್ತಿರುವುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





















































 
 

ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಕುಟುಂಬದ ಇತಿಹಾಸದತ್ತ ಮೆಲುಕು ಹಾಕಿ, ರಜಾಕರರ ದಾಳಿಯ ನಡುವೆ ನಿಮ್ಮ ತಂದೆಯವರು ಹೇಗೆ ಬದುಕುಳಿದರು? ಎಂಬುದನ್ನು ಅವಲೋಕನ ಮಾಡಿ. ಹಾಗಿದ್ದರೂ ನೀವು ರಜಾಕಾರರು ಹಾಗೂ ರಜಾಕ ಸಂಸ್ಕೃತಿಯನ್ನು ಒಮ್ಮೆಯೂ ಟೀಕಿಸಲಿಲ್ಲ, ಬದಲಾಗಿ ಅದನ್ನು ಪೋಷಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರರಾಗಿ ದೇಶವಿರೋಧಿ ಮನಸ್ಥಿತಿಯ ಸಂಘಟನೆಗಳ ಪ್ರತಿನಿಧಿ ಎಂಬಂತೆ ವರ್ತಿಸುತ್ತಿದ್ದೀರಿ. ರಾಷ್ಟ್ರಭಕ್ತ ಸಂಘಟನೆ ಆರ್‌ಎಸ್‌ಎಸ್‌ನ್ನು ಟೀಕಿಸಿ, ಅವಹೇಳನ ಮಾಡುವುದನ್ನು ರಾಜಕೀಯ ಅಧಿಕಾರ ಅನುಭವಿಸುವ ಏಕೈಕ ಉದ್ದೇಶಕ್ಕಾಗಿ ಬದುಕಿನ ಧ್ಯೇಯವನ್ನಾಗಿ ಮಾಡಿಕೊಂಡಿದ್ದೀರಿ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಎಂದರೆ ಹಿಂದೂ ಧರ್ಮವನ್ನು ವಿರೋಧಿಸುವುದು, ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡುವುದು, ಆ ಮೂಲಕ ರಾಷ್ಟ್ರ ವಿದ್ವಾಂಸಕ ಶಕ್ತಿಗಳನ್ನು ಉತ್ತೇಜಿಸುವುದು ಮುಖ್ಯ ಅಜೆಂಡಾ ಆಗಿದೆ. ಅದನ್ನು ಪ್ರತಿನಿಧಿಸಿ ಆರ್‌ಎಸ್‌ಎಸ್‌ ಹಾಗೂ ರಾಷ್ಟ್ರಭಕ್ತ ಸಂಘಟನೆಗಳ ವಿರುದ್ಧ ಬೊಬ್ಬೆ ಹೊಡೆಯುವ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿ, ನಿಮ್ಮ ಹೈಕಮಾಂಡ್‌ನಿಂದ ಶಹಬ್ಬಾಸ್ ಎನ್ನಿಸಿಕೊಳ್ಳುವ ಪೈಪೋಟಿಯಲ್ಲಿ ನಿರತರಾಗಿದ್ದೀರಿ ಎಂದು ಅಪಹಾಸ್ಯ ಮಾಡಿದ್ದಾರೆ.

error: Content is protected !!
Scroll to Top