ಬ್ರಹ್ಮಾವರದಲ್ಲಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆಗೆ ಶರಣು
ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ದಿ.ಎಚ್.ಗೋಪಾಲ ಭಂಡಾರಿ ಅವರ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸುದೀಪ್ ಭಂಡಾರಿ ಎಂದು ಗುರುತಿಸಲಾಗಿದೆ. ನಿನ್ನೆ ಸಾಯಂಕಾಲ ಅವರು ಹೆಬ್ರಿಯಲ್ಲಿದ್ದು ಬಳಿಕ ಬ್ರಹ್ಮಾವರಕ್ಕೆ ಹೋಗಿದ್ದರು ಎನ್ನಲಾಗಿದೆ.
ಸುದೀಪ್ ಭಂಡಾರಿ ಬಾರಕೂರಿನಲ್ಲಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಾಯಿ ಪ್ರಕಾಶಿನಿ, ಸಹೋದರ ಪ್ರದೀಪ, ಸಹೋದರಿ ದೀಪಾ, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
























