ಬೆಂಗಳೂರು: ಬಿಜೆಪಿಯು ಯಡಿಯೂರಪ್ಪ ಅವರ ಹಿಡಿತದಿಂದ ಮುಕ್ತವಾದಲ್ಲಿ ಮಾತ್ರ ಅದಕ್ಕೆ ಭವಿಷ್ಯ ಇದೆ. ನಾನು ಬಿ ಎಸ್ ವೈ ಬಗೆಗಿನ ಧೋರಣೆಯಲ್ಲಿ ಮೆತ್ತಗಾಗಿಲ್ಲ. ಹಾಗೆಯೇ, ಅವರ ಜೊತೆಗೆ ರಾಜಿಯೂ ಆಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯಡಿಯೂರಪ್ಪ ಜೊತೆಗೆ ಸಾಫ್ಟ್ ಎನ್ನುವ ಶಬ್ಧ ನನ್ನ ಶಬ್ದ ಕೋಶದಲ್ಲೇ ಇಲ್ಲ. ವರಿಷ್ಠರು ಯಡಿಯೂರಪ್ಪ ಜೊತೆಗೆ ಕ್ಷಮೆ ತೋರುವಂತೆ ಹೇಳಿದರೂ ಕೇಳಲಾರೆ. ಬಿಜೆಪಿಗೆ ಹಿಂದುತ್ವ ಮತ್ತು ಭವಿಷ್ಯ ಬೇಕಾದಲ್ಲಿ ಯಡಿಯೂರಪ್ಪ ಅವರನ್ನು ಕೈ ಬಿಡಲಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಬಗ್ಗೆಯೂ ಮಾತನಾಡಿರುವ ಅವರು, ಬಿಹಾರದ ಚುನಾವಣೆಗೆ ಹಣ ಹೊಂದಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಸಚಿವರಿಗೆ ಔತಣಕೂಟವನ್ನು ಆಯೋಜನೆ ಮಾಡಿದ್ದಾರೆ. ಡಿ. ಕೆ. ಶಿ. ಅವರು ಬೆಂಗಳೂರಿನಲ್ಲಿ ಚದರ ಅಡಿಗೆ 75 ರೂ. ಸಂಗ್ರಹಿಸಿ ಅದರಲ್ಲಿ 50 ರೂ. ಗಳನ್ನು ಬಿಹಾರ ಚುನಾವಣೆಗೆ ನೀಡುತ್ತಿದ್ದಾರೆ. ಯಾರು ಹೆಚ್ಚು ಹಣ ನೀಡುತ್ತಾರೆ ಎನ್ನುವುದರ ಮೇಲೆ ನವೆಂಬರ್ ಕ್ರಾಂತಿ ನಡೆಯಲಿದೆ ಎಂದು ತಿಳಿಸಿದ್ದಾರೆ.
























