ಅ. 18: ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಮಕ್ಕಳ ‘ಗೊಂಬೆ ರಾವಣ’ ನಾಟಕ

ಪುತ್ತೂರು: ಯುವ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ವಿದ್ದು ಉಚ್ಚಿಲ ಅವರ ಮಾರ್ಗದರ್ಶನದಲ್ಲಿ, ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಸ್ಥೆ ಬೆಳ್ಳಾರೆ ನೇತೃತ್ವದ ಗೊಂಬೆ ರಾವಣ ಎಂಬ ಮಕ್ಕಳ ರಂಗ ನಾಟಕ ಅ. 18 ಶನಿವಾರದಂದು ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 13 ಮಕ್ಕಳು ಈ ರಂಗನಾಟಕದಲ್ಲಿ ಅಭಿನಯಿಸಲಿದ್ದಾರೆ. ಕಲಾ ಪೋಷಕರ ಸಹಕಾರದ ಜೊತೆಗೆ ‘ಮುದ್ರಾರಂಗ’ – ಚಿಣ್ಣರ ನಿರಂತರ ಯಾನ ಎಂಬ ಹೆಸರಿನ ಜೊತೆಗೆ ಕಲಾ ಜಗತ್ತಿಗೆ ಹೆಜ್ಜೆ ಇಡುತ್ತಿರುವ ಮಕ್ಕಳ ನಾಟಕವನ್ನು ನೋಡಿ, ಪ್ರೋತ್ಸಾಹ ನೀಡುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಮಹಾಬಲ ಕಲ್ಮಡ್ಕ(ರಂಗ ಸುರಭಿ ಕಲ್ಮಡ್ಕ) ದೀಪ ಪ್ರಜ್ವಲನ ಮಾಡಲಿದ್ದಾರೆ. ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು (ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ), ಆರ್. ಕೆ. ಭಾಸ್ಕರ್ ಬಾಳಿಲ (ನಿವೃತ್ತ ಮುಖ್ಯ ಶಿಕ್ಷಕರು, ಹಿರಿಯ ರಂಗ ನಾಟಕ ನಿರ್ದೇಶಕರು), ದಯಾಕರ ಆಳ್ವ ಕುಂಬ್ರ (ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಮುಕ್ಕೂರು), ಪದ್ಮನಾಭ ಶೆಟ್ಟಿ ಪೆರುವಾಜೆ (ಮಾಲಕರು. ಜೆ.ಡಿ. ಆಡಿಟೋರಿಯಂ ಪೆರುವಾಜೆ) ಭಾಗವಹಿಸಲಿದ್ದಾರೆ. ಪ್ರದೀಪ್ ಕುಮಾರ್ ರೈ ಪನ್ನೆ ಅವರು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.





















































 
 

ಈ ನಾಟಕದ ರಚನೆ ಗಜಾನನ ಶರ್ಮ ಅವರದ್ದಾಗಿದ್ದು, ದಿವಾಕರ ಕಟೀಲ್ ಅವರು ಸಂಗೀತ ನೀಡಿದ್ದಾರೆ. ರಾಜ್‌ಮುಖೇಶ್ ಸುಳ್ಯ ಅವರ ಸಾಂಗತ್ಯವಿದ್ದು, ಪ್ರಸಾದನ ಕಾರ್ಯ ಶಿವರಾಮ ಕಲ್ಮಡ್ಕ ಅವರದ್ದಾಗಿದೆ. ಮಧು ಉಜಿರೆ, ರಂಜನ್ ಬೆಳ್ಳಾರೆ ಅವರ ರಂಗ ವಿನ್ಯಾಸ ಇದ್ದು, ಧ್ವನಿ ಮತ್ತು ಬೆಳಕಿನಲ್ಲಿ ಪ್ರಶಾಂತ್ ಕಳಂಜ ಸಹಕರಿಸಲಿದ್ದಾರೆ.

ಪಾತ್ರವರ್ಗದಲ್ಲಿ ಚಿರಾಗ್ ಮಣಿಮಜಲು, ಧ್ಯಾನ್ ರೈ ಜಿ. ಗೋಳ್ತಿಲ, ಆಣ್ವಿಕ ಕೆ. ಏನೆಕಲ್, ದಿಶಾ ಬಿ. ಎಲ್. ಕೊಳೆಂಜಿಕೋಡಿ, ಧರಿತ್ರಿ ಶೆಟ್ಟಿ ಎಣ್ಮೂರುಗುತ್ತು, ಕಂಗನಾ ಪೋಗ್ಗೋಳಿ, ಆರಾಧ್ಯ ಕೇರ್ಪಡ, ಪ್ರತೀಕ್ಷಾ ಬಿ. ತಡಗಜೆ, ಪಿ. ಮನ್ವಿ ದಾಸನಮಜಲು, ಅಸ್ಮಿ ಕೆ. ಪಿ. ಎಣ್ಮೂರು ಪಟ್ಟೆ, ಆದ್ಯ ಜಿ. ರೈ ಎಣ್ಮೂರುಗುತ್ತು, ಯಶ್ವಿತ್ ಕೆ. ಸಿ. ಕೇರ್ಪಡ, ಶಿಶಿಲ್ ಕೆ.ಪಿ. ಕರಿಂಬಿಲ ಬಣ್ಣ ಹಚ್ಚಲಿದ್ದಾರೆ.

error: Content is protected !!
Scroll to Top