ಖಾನಾಪುರ: ಯುವಕನೊಬ್ಬ ಪ್ರೀತಿ ಮಾಡು ಎಂದು ಪೀಡಿಸಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಲತ್ತಿ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಅಶ್ವಿನಿ ಕೋಲಾರ(17) ಎಂದು ಗುರುತಿಸಲಾಗಿದೆ.
ನಂದಳ್ಳಿ ಗ್ರಾಮದ ರತನ್ ಪಾಟೀಲ್ (26) ಎಂಬಾತ ಅಶ್ವಿನಿಗೆ ತನ್ನನ್ನು ಪ್ರೀತಿಸಬೇಕು. ಇಲ್ಲವಾದಲ್ಲಿ ನಿನ್ನನ್ನು ನಾನು ಬಿಡುವುದಿಲ್ಲ ಎಂದು ಕಳೆದೊಂದು ವರ್ಷದಿಂದ ಬೆದರಿಕೆ ಹಾಡುತ್ತಿದ್ದ. ಲೈಂಗಿಕ ಕಿರುಕುಳ ಸಹ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಖಾನಾಪುರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























