ಬೆಂಗಳೂರು: ಲಾಲ್ ಬಾಗ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಸಮಸ್ಯೆಗಳನ್ನು ಚಲಿಸುವ ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಮುಂದಿನ ಆರು ದಿನಗಳಲ್ಲಿ ಆರು ಪ್ರಮುಖ ಉದ್ಯಾನಗಳಲ್ಲಿ ಬೆಳಗ್ಗೆ 1 ತಾಸು ನಡಿಗೆ ಮತ್ತು ಒಂದು ತಾಸು ಸಾರ್ವಜನಿಕರ ಜೊತೆಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಇಂದು ಲಾಲ್ಬಾಗ್ನಲ್ಲಿ ಸಾರ್ವಜನಿಕರ ಜೊತೆಗೆ ಹಾಳಾದ ರಸ್ತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು. ಆಂಬ್ಯುಲನ್ಸ್ ಸಂಚಾರಕ್ಕೆ ಅನುಕೂಲಕರ ಮತ್ತು ಉದ್ದೇಶಿತ ಟನಲ್ ರಸ್ತೆಗೆ ಸಂಬಂಧಿಸಿದ ಹಾಗೆಯೂ ಮಾತುಕತೆ ನಡೆಸಿದರು.
























