ನವದೆಹಲಿ: ಉಗ್ರರ ಗುಂಪುಗಳನ್ನು ಅಫ್ಘಾನಿಸ್ತಾನ ಸಂಪೂರ್ಣವಾಗಿ ನಿರ್ನಾಮ ಮಾಡಿದ್ದು, ಇದೇ ರೀತಿಯ ಶಾಂತಿಯ ಹಾದಿಯನ್ನು ಪಾಕಿಸ್ತಾನ ತುಳಿಯಬೇಕು ಎಂದು ಭಾರತದ ನೆಲದಲ್ಲಿ ನಿಂತು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
LET, ಜೈಶ್ ಎ ಮೊಹಮ್ಮದ್‌ನಂತಹ ಉಗ್ರ ಗುಂಪುಗಳು ಈ ಹಿಂದೆ ಅಫ್ಘಾನಿಸ್ತಾನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವುಗಳೆಲ್ಲವನ್ನೂ ಸಂಪೂರ್ಣ ನಿರ್ನಾಮ ಮಾಡಲಾಗಿದೆ. ಪ್ರಸ್ತುತ ಅಫ್ಘಾನ್‌ನಲ್ಲಿ ಯಾವ ಭಯೋತ್ಪಾದಕರೂ ಇಲ್ಲ. ಅವರ ನಿಯಂತ್ರಣದಲ್ಲಿ ತುಂಡು ಭೂಮಿಯೂ ಇಲ್ಲ. ಪ್ರಸ್ತುತ ಅಫ್ಘಾನ್‌ನ ಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದಕ ಕೃತ್ಯದಿಂದ ಸಂಕಷ್ಟ ಅನುಭವಿಸುತ್ತಿರುವ ಭಾರತದ ನೆಲದಿಂದ ಮುತ್ತಕಿ ಅವರು ಪಾಪಿ ಪಾಕಿಸ್ತಾನಕ್ಕೆ ಈ ಸಂದೇಶ ರವಾನೆ ಮಾಡಿರುವುದಾಗಿದೆ. ಶಾಂತಿ ಸ್ಥಾಪನೆಗೆ ಅಫ್ಘಾನ್ ತೆಗೆದುಕೊಂಡ ಉಗ್ರ ವಿರೋಧಿ ನಿಲುವುಗಳನ್ನು ಇತರ ಉಗ್ರ ಪೋಷಕ ರಾಷ್ಟ್ರಗಳು ಸಹ ತೆಗೆದುಕೊಳ್ಳಲಿ ಎಂದು ಅವರು ನುಡಿದಿದ್ದಾರೆ.
























