ಶ್ರೀ ಕಾಳಿಕಾಂಬಾ ಯಕ್ಷ ಟ್ರಸ್ಟ್ ನಿಂದ ಶ್ರೀ ವಾಲ್ಮೀಕಿ ಜಯಂತಿ ಆಚರಣೆ

ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್. ರಿ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.

ಶಿಕ್ಷಕಿ ಮತ್ತು ಕಲಾವಿದೆ ಪುಷ್ಪಾ ತಿಲಕ್ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಆದಿ ಕಾವ್ಯವೆನಿಸಿದ ಶ್ರೀಮದ್ ರಾಮಾಯಣವನ್ನು ರಚಿಸಿ ಅದರಲ್ಲಿರುವ ಪಾತ್ರಗಳು ವ್ಯಕ್ತಿಗಳಾಗದೆ ವ್ಯಕ್ತಿತ್ವಗಳಾಗಿ ನಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ. ಕಥಾನಾಯಕನಾದ ಶ್ರೀರಾಮಚಂದ್ರನ ಜೀವನದ ಬಹುಮುಖಿ ದರ್ಶನವನ್ನು ಈ ಕಾವ್ಯವು ಮಾಡಿಸುತ್ತದೆ. ವಾಲ್ಮೀಕಿ ರಾಮಾಯಣವು ವಿಶ್ವದ ಹೆಚ್ಚಿನ ಭಾಷೆಗಳಲ್ಲಿ ಭಾಷಾಂತರಗೊಂಡು ಪ್ರಕಟವಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ರಾಮಾಯಣ ಕಾವ್ಯದಲ್ಲಿ ವಾಲ್ಮೀಕಿಯು ಮಾನವ, ದಾನವ ಮತ್ತು ವಾನರ ಸಂಸ್ಕೃತಿಯ ಜೀವನ ವಿಧಾನ, ಆಚಾರ-ವಿಚಾರ, ನೀತಿ ನಿಯಮ ಮತ್ತು ಒಳಿತು ಕೆಡುಕುಗಳನ್ನು ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ ಎಂದು ತಿಳಿಸಿ ಟ್ರಸ್ಟಿನ ಸುವರ್ಣ ಮಹೋತ್ಸವದ ಸಮಾರೋಪ ಕಾರ್ಯಕ್ರಮದ ಬಗ್ಗೆ ಸದಸ್ಯರ ಅಭಿಪ್ರಾಯಗಳನ್ನು ಕ್ರೋಢೀಕರಿಸಿದರು.





















































 
 

ಉಮೇಶ್ ಶೆಣೈ ರಾಮನಗರ, ಶ್ರೀಧರ್ ಎಸ್ಪಿ ಕೃಷ್ಣಾಪುರ, ಸುರೇಶ್ ರಾವ್.ಬಿ, ಆಶಾಲತಾ ಕಲ್ಲೂರಾಯ ರಾಮಕುಂಜ, ರಾಜೇಶ್ ಪ್ರಭು ಉಪಸ್ಥಿತರಿದ್ದರು.
ಕಾಳಿಕಾಂಬ ಟ್ರಸ್ಟಿನ ಸಹ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಸ್ವಾಗತಿಸಿ ಉಪಾಧ್ಯಕ್ಷ ಕೆ. ಮಹಾಲಿಂಗೇಶ್ವರ ಭಟ್ಪೆ ಪೆರಿಯಡ್ಕ ವಂದಿಸಿದರು.

error: Content is protected !!
Scroll to Top