ಮಡಿಕೇರಿ: ರಾಜ್ಯ ಸರ್ಕಾರ ಕೊಡಮಾಡುವ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಕೊಡಗಿನ ಜಿ. ಕೆ. ಮುತ್ತಮ್ಮ ಅವರು ಭಾಜನರಾಗಿದ್ದಾರೆ.
ಸಿದ್ದಾಪುರ ಸಮೀಪದ ದಿಡ್ಡಳ್ಳಿಯ ಗಿರಿಜನರಿಗೆ ಸೂರು ಕೊಡಿಸುವ ಹಿನ್ನೆಲೆ ಮುತ್ತಮ್ಮ ಅವರು ಈ ಹಿಂದೆ ತೀವ್ರ ಸ್ವರೂಪದ ಹೋರಾಟ ಮಾಡಿದ್ದರು.
ಇವರ ಪ್ರಯತ್ನದ ಫಲವಾಗಿ ಅಂದಿನ ಸರ್ಕಾರ ಕುಶಾಲನಗರದ ಸಮೀಪದ ಬಸವನಹಳ್ಳಿಯಲ್ಲಿ ಪುನರ್ವಸತಿ ಕೇಂದ್ರವನ್ನು ಆರಂಭ ಮಾಡಿತ್ತು. ನಿರಾಶ್ರಿತರಿಗೆ ಎಲ್ಲಾ ಸವಲತ್ತುಗಳನ್ನು ಒಳಗೊಂಡ ನಿವೇಶನ ಮತ್ತು ಮನೆ ಗಳನ್ನು ನಿರ್ಮಾಣ ಮಾಡಿಕೊಟ್ಟಿತ್ತು.
ಮುತ್ತಮ್ಮ ಅವರು ದುರ್ಬಲ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದು, ಇವರ ಸಂಘಟನಾ ಚಾತುರ್ಯಕ್ಕೆ ಸರ್ಕಾರ ಈ ಪ್ರಶಸ್ತಿ ಘೋಷಣೆ ಮಾಡಿದೆ.
























