ಬಾಗಿಲಿನ ಚಿಲಕ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಬೆಳ್ತಂಗಡಿ: ಕುತ್ಲೂರು ಗ್ರಾಮದ ಮಂಜುಶ್ರೀ ನಗರದ ಮನೆಯೊಂದರ ಬಾಗಿಲ ತಿಲಕ ಮುರಿದು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.

ಅವಿನಾಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಈ ಕೈಚಳಕ ತೋರಿದ್ದಾರೆ. ಈ ಘಟನೆ ಆ. 2 ರಿಂದ ಆ. 6 ರ ನಡುವೆ ನಡೆದಿದೆ ಎಂದು ವೇಣೂರು ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಮನೆಯ ಮುಂಭಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ, ಬೆಡ್ ರೂಂ ಒಳಗಿದ್ದ ಕಪಾಟಿನ ತಿಲಕ ಮುರಿದು, ಅದರೊಳಗೆ ವ್ಯಾನಿಟ್ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ದೋಚಿರುವುದಾಗಿದೆ.





















































 
 

error: Content is protected !!
Scroll to Top