ಮಹರ್ಷಿ ವಾಲ್ಮೀಕಿ ಜಯಂತಿ: ಪಿಎಂ ಮೋದಿ ಅವರಿಂದ ಶುಭಾಶಯ

ನವದೆಹಲಿ: ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹರ್ಷಿ ವಾಲ್ಮೀಕಿ ಜಯಂತಿಯ ಹಿನ್ನೆಲೆ ಶುಭಾಶಯಗಳನ್ನು ತಿಳಿಸಿದ್ದಾರೆ.

ವಾಲ್ಮೀಕಿ ಅವರ ಆದರ್ಶ ಚಿಂತನೆಗಳು ಸಮಾಜ ಮತ್ತು ಕುಟುಂಬದ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದ್ದಾರೆ.

ಶುಭಾಶಯ ಕೋರಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮಹರ್ಷಿ ವಾಲ್ಮೀಕಿ ಜಯಂತಿಯಂದು ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳು. ಪ್ರಾಚೀನ ಕಾಲದಿಂದಲೂ ಅವರ ಶುದ್ಧ ಮತ್ತು ಆದರ್ಶ ಚಿಂತನೆಗಳು ನಮ್ಮ ಸಮಾಜ ಮತ್ತು ಕುಟುಂಬದ ಮೇಲೆ ಆಳವಾದ ಪ್ರಭಾವ ಬೀರಿವೆ. ಸಾಮಾಜಿಕ ಸಾಮರಸ್ಯವನ್ನು ಆಧರಿಸಿ ಅವರ ಪರಿಕಲ್ಪನಾ ಬೆಳಕು ಎಲ್ಲಾ ನಾಗರಿಕರ ಬದುಕನ್ನು ಬೆಳಗುತ್ತಿರುತ್ತದೆ ಎಂದು ಅವರು ಹೇಳಿದ್ದಾರೆ.





















































 
 

error: Content is protected !!
Scroll to Top