ಪೊಳಲಿ: ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ (ರಿ) ಇದರ 7ನೇ ಸೇವಾ ಯೋಜನೆಯಡಿಯಲ್ಲಿ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗೆ ನೆರವಿನ ಹಸ್ತ ಕಾರ್ಯಕ್ರಮ ನಡೆಯಿತು.
ಭವತಿ ಭಿಕ್ಷಾಂದೇಹಿ ಕಾರ್ಯಕ್ರಮದ ಮೂಲಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ವಿಚಿತ್ರ ವೇಷಹಾಕಿ ಡಬ್ಬಿಯನ್ನು ಹಿಡಿದು ಶ್ರೀ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ನೀಡಿದ ಹಣವನ್ನು ಸಂಗ್ರಹ ಮಾಡಿದ್ದು, ಒಟ್ಟುಗೂಡಿದ 1,22,369ರೂ. ಹಣವನ್ನು ಅನಾರೋಗ್ಯ ಪೀಡಿತ ಮಗು ಸನ್ವಿತ್ ಕೆ. ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಸರೆ ಪೌಂಡೇಷನ್ (ರಿ) ಪುಂಚಮೆ ಇದರ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಮತ್ತು
ಆಸರೆ ಎನಿಮಲ್ ಟ್ರಸ್ಟ್ (ರಿ)ಸುರತ್ಕಲ್ ಇದರ ಮಾಲಕ ಸಾಕ್ಷಿ ಸುನಿಲ್ ಹಾಗು ಸೋಷಿಯಲ್ ಮೀಡಿಯರ್ ಮಿಜಾರ್ ಊರರ್ದ ತುಳುವೆ ಜಿತೇಶ್ ಮಿಜಾರ್ ಮತ್ತು
ಲೈಫ್ ಆಫ್ ತುಳುವಾಸ್ ಯ್ಯೂಟುಬ್ ಚಾನೆಲ್ನ ರಾಜಶ್ರಿ ಪೊಳಲಿ.. ಹಿರಿಯರಾದ ಶ್ರೀ ಸೇಸಪ್ಪ ಗುರು ಸ್ವಾಮಿ ಮತ್ತು ವಿಶ್ವನಾಥ ಗುರುಸ್ವಾಮಿ ಹಾಗು ರಾಜೀವ ಪೂಜಾರಿ ಸಾಣೂರು ಪದವು, ಹಿತೈಷಿ ಸಂದೀಪ್ ಪೊಳಲಿ ಹಾಗು ಪತ್ರಕರ್ತ ಶಿವಪ್ರಸಾದ್ ನಾಯಕ್ ಸೊಲ್ತಾಡಿ ಹಾಗು ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ (ರಿ) ಇದರ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.
ತಂಡದ ಸದಸ್ಯ ವಿಕ್ರಮ್ ಒಡ್ಡೂರು ಸ್ವಾಗತಿಸಿ, ನಿರೂಪಣೆ ಮಾಡಿದರು.
























