ನವದೆಹಲಿ: ಭಾರತದ ಕ್ರಾಂತಿಕಾರಿ, ವಕೀಲ ಮತ್ತು ಪತ್ರಕರ್ತ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತಾಂಬೆಯ ಶ್ರದ್ಧಾವಂತ ಪುತ್ರ ಶ್ಯಾಮ್ಜಿ ಕೃಷ್ಣ ವರ್ಮಾ ಅವರ ಜನ್ಮ ದಿನದಂದು ದೇಶದ ಎಲ್ಲಾ ಜನರ ಪರವಾಗಿ ಗೌರವಯುತ ನಮನಗಳು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅವರ ಸೇವೆ, ಸಮರ್ಪಣೆ, ಧೈರ್ಯವನ್ನು ಸದಾ ಭಕ್ತಿಯಿಂದ ಸ್ಮರಣೆ ಮಾಡಲಾಗುತ್ತದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಅವರ ಶೌರ್ಯ ಮತ್ತು ನಿರ್ಭಯತೆಯ ಕತೆ ಸ್ಪೂರ್ತಿಯ ದೊಡ್ಡ ಮೂಲವಾಗಿದೆ ಎಂದು ಬಣ್ಣಿಸಿದ್ದಾರೆ.
























