ಪಿಒಕೆಯ ಪ್ರಕ್ಷುಬ್ಧ ಸ್ಥಿತಿಗೆ ಪಾಕಿಸ್ತಾನವೇ ಕಾರಣ: ಭಾರತ ಆಕ್ರೋಶ

ನವದೆಹಲಿ: ಪಾಕಿಸ್ತಾನದ ದಶಕಗಳ ಶೋಷಣೆ, ದಬ್ಬಾಳಿಕೆಯ ಅನಿವಾರ್ಯ ಪರಿಣಾಮವೇ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯಾಗಿದೆ. ಪಿಒಕೆ ಎಂದಿಗೂ ಭಾರತದ ಅವಿಭಾಜ್ಯ ಅಂಗವೇ ಆಗಿರುತ್ತದೆ ಎಂದು ಭಾರತ ತಿಳಿಸಿದೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಿಒಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇದಕ್ಕೆ ಕಾರಣ ಪಾಕಿಸ್ತಾನ. ಪಿಒಕೆಯಲ್ಲಿ ನಡೆದ ಹಲವು ಪ್ರತಿಭಟನೆಗಳ ವರದಿಯನ್ನು ನೋಡಿದ್ದೇವೆ. ಪಾಕಿಸ್ತಾನ ಅಲ್ಲಿನ ಅಮಾಯಕ ನಾಗರಿಕರ ಮೇಲೆ ನಡೆಸಿದ ದೌರ್ಜನ್ಯವನ್ನು ಗಮನಿಸಿದ್ದೇವೆ. ಇವೆಲ್ಲದರ ಹೊಣೆಯನ್ನು ಪಾಕಿಸ್ತಾನ ಹೊತ್ತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪಿಒಕೆಯಲ್ಲಿ ಪಾಕ್ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಈ ಘಟನೆಯಲ್ಲಿ 200 ಕ್ಕೂ ಅಧಿಕ ಜನರು ಗಾಯಗೊಂಡಿದ್ದು, 12 ಜನರು ಮೃತರಾಗಿದ್ದಾರೆ. ಹಿಂಸಾತ್ಮಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಧಿಕಾರಿಗಳು ಮೊಬೈಲ್ ಮತ್ತು ಅಂತರ್ಜಾಲ ಸೇವೆಯನ್ನು ಸ್ಥಗಿತ ಮಾಡಿದ್ದಾರೆ.





















































 
 
error: Content is protected !!
Scroll to Top