ಮೋದಿಯನ್ನು ಸುಡಬೇಕೆಂದು ವಿವಾದಿತ ಹೇಳಿಕೆ ನೀಡಿದ ಉದಿತ್ ರಾಜ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ರಾವಣನ ಸಂಕೇತ ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಆಧುನಿಕ ರಾವಣನ ಸಂಕೇತ. ಅವರು ತಮ್ಮ ಚಿನ್ನದ ಅರಮನೆಯನ್ನು ನಿರ್ಮಿಸುತ್ತಿದ್ದಾರೆ. ಒಮ್ಮೆ ಅದನ್ನು ಪ್ರವೇಶಿಸಿದ ನಂತರ ಅದೇ ಚಿನ್ನದ ಅರಮನೆ ಉರಿದು ಹೋಗುವುದನ್ನು ನೋಡುತ್ತಾರೆ ಎಂದು ನಾಲಗೆ ಹರಿಬಿಟ್ಟಿದ್ದಾರೆ.
ದೆಹಲಿಯ ರಾವಣನನ್ನು ಸುಡಬೇಕು. ದೆಹಲಿಯ ರಾವಣನನ್ನು ಸುಡುವ ದಿನ ಹತ್ತಿರದಲ್ಲಿದೆ ಎಂದು ಉದಿತ್ ರಾಜ್ ಹೇಳಿದ್ದಾರೆ. ಪ್ರಧಾನಿ ಮೋದಿ ಹೆಚ್ಚು ಕಾಲ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಶೀಘ್ರದಲ್ಲೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಉದಿತ್ ರಾಜ್ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿರುವ ಬಿಜೆಪಿ ಇದು ಕಾಂಗ್ರೆಸ್‌ನ ಮೋದಿ ದ್ವೇಷದ ಇನ್ನೊಂದು ಮಾದರಿಯಷ್ಟೇ. ಮೋದಿ ದ್ವೇಷ ಮತ್ತು ಭಾರತ ದ್ವೇಷವೇ ಈಗ ಕಾಂಗ್ರೆಸಿನ ನಿಗದಿತ ಕಾರ್ಯಸೂಚಿಯಾಗಿದೆ. ಅವದ್ವಷದ ಪರಾಕಾಷ್ಠೆ ಎಷ್ಟಿದೆಯೆಂದರೆ ಅವರು ಮೋದಿಯ ದಿವಂಗತರಾಗಿರುವ ತಾಯಿಯನ್ನೂ ಬಿಡದೆ ಟೀಕಿಸುತ್ತಿದ್ದಾರೆ. ಭಾರತದ ವಿಪಕ್ಷ ಇಷ್ಟು ಕೀಳುಮಟ್ಟಕ್ಕೆ ಇಳಿದಿರುವ ಉದಾಹರಣೆ ಹಿಂದೆಂದೂ ಇರಲಿಲ್ಲ ಎಂದಿದೆ.
ನಕ್ಸಲರನ್ನು ಅಮರ್ಥಿಸಿಕೊಂಡ, ಆರ್‌ಎಸ್‌ಎಸ್‌ನ್ನು ಉಗ್ರ ಸಂಘಟನೆಯೆಂದು ಕರೆದ ಕಾಂಗ್ರೆಸ್ ನಾಯಕನೇ ಈಗ ಮೋದಿಯನ್ನು ರಾವಣನಿಗೆ ಹೋಲಿಸಿದ್ದಾರೆ. ಮೋದಿ ಟೀಕೆಯಿಂದಲೇ ಪಕ್ಷದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಇನ್ನೂ ಅನೇಕ ನಾಯಕರು ಕಾಂಗ್ರೆಸ್‌ನಲ್ಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಹೈಕಾಂಡ್‌ನ ಪೂರ್ಣ ಬೆಂಬಲವೂ ಇದೆ. ಇದು ಕಾಂಗ್ರೆಸ್‌ನ ಇಂದಿನ ದುರಂತ ವಾಸ್ತವ. ರಾಜಕೀಯ ಎದುರಾಳಿಗಳನ್ನು ಅವರು ಆಜನ್ಮ ವೈರಿಗಳಂತೆ ಭಾವಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಶೆಹಜಾದ್ ಪೋನವಾಲಾ ಹೇಳಿದ್ದಾರೆ.
























