ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ತೋರಿಸಿದ್ದ ಹಾಡು
ನವದೆಹಲಿ : ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಚಲನ ಮೂಡಿಸಿದ ವಂದೇ ಮಾತರಂ ಗೀತೆಗೆ ಈಗ 150ನೇ ವರ್ಷದ ಸಂಭ್ರಮ. ಈ ಸಂಭ್ರಮವನ್ನು ದೇಶಾದ್ಯಂತ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಬಂಕಿಮಚಂದ್ರ ಚಟರ್ಜಿಯವರು ದೇಶಕ್ಕೆ ರಾಷ್ಟ್ರಗೀತೆಯಾಗಿ ರಚಿಸಿ ಗೀತೆ ವಂದೇಮಾತರಂ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಗೀತೆ ಪ್ರತಿಯೊಬ್ಬರಲ್ಲಿ ಕಿಚ್ಚು ಮೂಡಿಸಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಸ್ವರೂಪ ಬದಲಿಸಿತ್ತು. ದೇಶ ಒಗ್ಗಟ್ಟಾಗಿ ಹೋರಾಟ ಮಾಡಲು ಈ ಗೀತೆ ಸ್ಫೂರ್ತಿಯಾಗಿತ್ತು. ಇದೀಗ ವಂದೇ ಮಾತರಂ ಗೀತೆಗೆ 150ನೇ ವರ್ಷದ ಸಂಭ್ರಮ. ಹೀಗಾಗಿ ದೇಶಾದ್ಯಂತ ಆಚರಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಆಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಂಸ್ಕೃತದಲ್ಲಿರುವ ವಂದೇ ಮಾತರಂ ಹಾಡು ದೇಶದ ಜನರನ್ನು ಬಡಿದೆಬ್ಬಿಸಿದ ಗೀತೆ. ಇಂಡಿಯಾ. ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ವಂದೇ ಮಾತರಂ ರಾಷ್ಟ್ರಗೀತೆ ಜನ ಗಣ ಮನ ಗೀತೆಗೆ ಸಮನಾಗಿದೆ ಎಂದು ಉಲ್ಲೇಖಿಸಲಾಗಿದೆ. ನೆಲವನ್ನುತಾಯಿಗೆ ಹೋಲಿಸಿ ಬರೆದ ಈ ಗೀತೆ ಭಾರತ ರಾಷ್ಟ್ರಗೀತೆಯಾಗಿ ಪರಿಗಣಿಸಲ್ಪಟ್ಟಿತ್ತು. ಬಳಿಕ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆ ಎಂದು ಘೋಷಿಸಲಾಗಿತ್ತು.
























