ಎವಿಜಿ ಸ್ಕೂಲ್’ನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನ್ಮ ದಿನಾಚರಣೆ

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ರಾಷ್ಟ್ರಪಿತ ಗಾಂಧೀಜಿಯವರ 156ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 121ನೇ ಜನ್ಮದಿನಾಚರಣೆಗಳ ಪ್ರಯುಕ್ತ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ದೀಪ ಪ್ರಜ್ವಲಿಸಿ, ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ರಾಷ್ಟ್ರಪಿತ ಗಾಂಧೀಜಿ ಮತ್ತು ಪೂರ್ವ ಪ್ರಧಾನಿ ಶಾಸ್ತ್ರೀಜಿಯವರ ಬದುಕಿನ ಆದರ್ಶಗಳನ್ನು ಅನುಸರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿ ಈ ನಮ್ಮ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಿಂದ ಗಾಂಧೀಜಿ, ಶಾಸ್ತ್ರೀಜಿಯವರಂತ ವ್ಯಕ್ತಿತ್ವಗಳು ಮೂಡಿಬರಲಿ ಎಂದು ಹಾರೈಸಿದರು

ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ರಾಷ್ಟ್ರಕ್ಕಾಗಿ ರಾಷ್ಟ್ರೀಯ ಚಿಂತನೆ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿ ನಮ್ಮ ಶಾಲೆಯಲ್ಲಿ ಇಂದು ರಾಷ್ಟ್ರೀಯ ಮೌಲ್ಯಗಳ ಆಧಾರದಲ್ಲಿ ನಾವು ವಿದ್ಯಾರ್ಥಿಗಳ ಚಿಂತನೆಯನ್ನು ರೂಪಿಸುತ್ತಿದ್ದೇವೆ ಎಂದರು.





















































 
 

ಶಾಲಾ ಸಂಚಾಲಕ ಎ ವಿ ನಾರಾಯಣ ಅವರು ಶುಭ ಹಾರೈಸಿದರು. ಶಾಲಾ ನಿರ್ದೇಶಕ ಗಂಗಾಧರ ಎ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬನ್ನೂರು ಶಾಲಾ ಶಿಕ್ಷಕಿ ಸುಶ್ಮಾ ಮತ್ತು ಮನೆಯವರ ವಿಶೇಷ ಉಪಸ್ಥಿತಿ ಇತ್ತು.

ಪ್ರಾಂಶುಪಾಲ ಅಮರನಾಥ್ ಪಟ್ಟೆ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಶುಭಾ ರೈ ಪ್ರಾರ್ಥಿಸಿ ಶಿಕ್ಷಕಿ ರಾಧಾ ವಂದಿಸಿದರು. ಶಾಲಾ ನಿರ್ದೇಶಕಿ ಪ್ರತಿಭಾದೇವಿ ನಾರಾಯಣ, ಶಿಕ್ಷಕಿ ತೀರ್ಥ, ಪೋಷಕರಾದ ಅಶ್ವಿನಿ ಶೇಖರ್, ಶಾಲಾ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ
ಜೋಸ್ತ್ನಾ ಎ.ಎನ್., ವಿಖ್ಯಾತ್ ಶೇಖರ್, ಅನಿಕಾ ಶೇಖರ್, ಶಿವಾರ್ಜುನ್, ಜಿತಿನ್ ಎ. ಎನ್. ಮತ್ತು ಚಿರಂತನ್ ಪಾಲ್ಗೊಂಡಿದ್ದರು.

error: Content is protected !!
Scroll to Top