ಕಟೀಲು ದೇವಳದಲ್ಲಿ ಮಹಿಳೆಯರಿಗೆ ದೇವರ ಶೇಷವಸ್ತ್ರ ವಿತರಣೆ

ನವರಾತ್ರಿ ಅಂಗವಾಗಿ 25 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸೀರೆ ವಿತರಣೆ

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಲಲಿತಾ ಪಂಚಮಿಯ ದಿನ ಮಹಿಳೆಯರಿಗೆ ಶೇಷವಸ್ತ್ರವಾಗಿ 25 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ವಿತರಿಸಲಾಯಿತು. ಸಂಜೆ ಮೂರರಿಂದಲೇ ಭಕ್ತರು ಸರದಿಯಲ್ಲಿ ನಿಂತಿದ್ದು, ಸಂಜೆ 5 ಗಂಟೆಯಿಂದ ಆರಂಭವಾದ ವಿತರಣೆ ತಡರಾತ್ರಿವರೆಗೆ ನಡೆಯಿತು.

ಈ ವರ್ಷದಲ್ಲಿ ಒಟ್ಟಾರೆ ಸುಮಾರು 44 ಸಾವಿರ ಸೀರೆಗಳನ್ನು ವಿತರಿಸಲು ದೇವಳ ಪೂರ್ವಸಿದ್ಧತೆ ಮಾಡಿಕೊಂಡಿತ್ತು. ಭಕ್ತರ ಸಾಲಿನಲ್ಲಿ ನೂಕುನುಗ್ಗಲು ತಪ್ಪಿಸಲು ದೇವಾಲಯದ ಮುಂಭಾಗದಲ್ಲಿ ವಿಶೇಷ ಅಟ್ಟಳಿಗೆ ಅಳವಡಿಸಲಾಗಿತ್ತು. ವಿತರಣೆ ಸಂದರ್ಭದಲ್ಲಿ ಭಕ್ತರು ನೇರವಾಗಿ ಅನ್ನದಾನದ ಛತ್ರಕ್ಕೆ ತೆರಳಿ ಶೇಷವಸ್ತ್ರದ ಜೊತೆಗೆ ಅನ್ನದಾನದ ಪ್ರಸಾದ ಸ್ವೀಕರಿಸಿದರು.





















































 
 
error: Content is protected !!
Scroll to Top