ಎ.ವಿ.ಜಿ ಅಸೋಸಿಯೇಟ್ಸ್, ಎ.ವಿ.ಜಿ. ಕನ್ಸಕ್ಷನ್ಸ್, ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್‌ಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿ ಮುನ್ನಡೆಸುತ್ತಿರುವ ಆಡಳಿತ ಮಂಡಳಿಯಿಂದ ಸಹಕಾರಿ ಕ್ಷೇತ್ರಕ್ಕೊಂದು ಕೊಡುಗೆಯಾಗಿ ಇದೀಗ ದ.ಕ. ಜಿಲ್ಲಾ ಮಟ್ಟದ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ದ.ಕ. ಎಂಬ ಸಂಸ್ಥೆಯು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ 29 ಸೆಪ್ಟೆಂಬರ್ 2025ನೆ ಸೋಮವಾರದಂದು ಲೋಕಾರ್ಪಣೆಗೊಳ್ಳುತ್ತಿದೆ.
ತನ್ನ ಎಲ್ಲಾ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯತೆಯನ್ನು ಪ್ರಮುಖ ಮೌಲ್ಯವಾಗಿ ಅಳವಡಿಸಿಕೊಂಡಿರುವ ಆಡಳಿತ ಮಂಡಳಿಯು ತನ್ನ ನೂತನ ಸಹಕಾರಿ ಸಂಸ್ಥೆಯನ್ನು ‘ಸುಭದ್ರ ಭಾರತಕ್ಕಾಗಿ ಸಮರ್ಥ ಸಹಕಾರಿ ಸಂಸ್ಥೆ’ ಎಂಬ ನಂಬಿಕೆಯೊಂದಿಗೆ ಲೋಕಾರ್ಪಣೆ ಮಾಡುತ್ತಿದೆ.
ದಿನಾಂಕ 29 ಸೆಪ್ಟೆಂಬರ್ 2025ರಂದು ಸೊಸೈಟಿಯ ಕಚೇರಿ ಕಟ್ಟಡದಲ್ಲಿ ಪೂರ್ವಾಹ್ನ ಗಂಟೆ 6.00ಕ್ಕೆ ಗಣಹೋಮದ ಮೂಲಕ ದೇವತಾ ಪ್ರಾರ್ಥನೆಯೊಂದಿಗೆ ಲೋಕಾರ್ಪಣ ಕಾರ್ಯವು ಚಾಲನೆ ಪಡೆಯಲಿದೆ. ಬಳಿಕ ಪೂರ್ವಾಹ್ನ ಗಂಟೆ 9.30ಕ್ಕೆ ಕಚೇರಿಯ ಉದ್ಘಾಟನ ಕಾರ್ಯಗಳು ನಡೆಯಲಿದ್ದು ಬೆಂಗಳೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಶ್ರೀ ಸಿ.ಜೆ. ಗಂಗಾಧರ ಅವರು ಕಚೇರಿಯ ಉದ್ಘಾಟನೆ, ಪುತ್ತೂರಿನ ಪೂರ್ವ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಭದ್ರತಾ ಕೋಶದ ಉದ್ಘಾಟನೆ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಶ್ರೀ ಶಶಿಕುಮಾರ್ ರೈ ಬಾಲೊಟ್ಟು ಅವರು ಗಣಕಯಂತ್ರದ ಉದ್ಘಾಟನೆ ಮತ್ತು ಮಂಗಳೂರಿನ ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಶ್ರೀ ಭಾಸ್ಕರ ದೇವಸ್ಯ ಅವರು ಅಧ್ಯಕ್ಷರ ಕೊಠಡಿಯ ಉದ್ಘಾಟನೆಗಳನ್ನು ನೆರವೇರಿಸಲಿದ್ದಾರೆ.
ಬಳಿಕ ಪೂರ್ವಾಹ್ನ ಗಂಟೆ 9.30ರಿಂದ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಕಳುವಾಜಿ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈಯವರು ದೀಪ ಪ್ರಜ್ವಲಿಸಲಿದ್ದಾರೆ. ಪುತ್ತೂರು ನಗರಸಭೆಯ ಅಧ್ಯಕ್ಷೆಯವರಾದ ಶ್ರೀಮತಿ ಲೀಲಾವತಿ ಅಣ್ಣು ನಾಯ್ಕ ಅವರು ಪ್ರಥಮ ಸಾಲ ಪತ್ರ ವಿತರಣೆ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ರಮೇಶ್ ಎಚ್ ಅವರು ಪ್ರಥಮ ಠೇವಣಿ ಪತ್ರ ವಿತರಣೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡ ಈಶ್ವರ ಭಟ್ಟರು ಸಂಸ್ಥೆಯ ಚಿಹ್ನೆಯ ಅನಾವರಣ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯವರಾಗಿ ರಾಜ್ಯ ಸೌಹಾರ್ದ ಸಹಕಾರ ಇದರ ನಿರ್ದೇಶಕಿಯವರಾದ ಶ್ರೀಮತಿ ಭಾರತಿ ಜಿ. ಭಟ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಚಿದಾನಂದ ಬೈಲಾಡಿ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ರವಿ ಮುಂಗ್ಲಿಮನೆ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಕಾವು ಹೇಮನಾಥ ಶೆಟ್ಟಿ, ಮತ್ತು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕೆಡೆಂಜಿಯವರು ಭಾಗವಹಿಸಲಿದ್ದಾರೆ.
ಎ.ವಿ.ಜಿ.ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಿಶೇಷತೆ
ಪುತ್ತೂರಿನ ರೈಲ್ವೆ ನಿಲ್ದಾಣ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಿಂದ ಕೇವಲ 300 ಮೀ. ಮತ್ತು ಸರಕಾರಿ ಬಸ್ ನಿಲ್ದಾಣದಿಂದ ಕೇವಲ 200 ಮೀ. ದೂರದಲ್ಲಿ ಖಾಸಗಿ ಬಸ್ ನಿಲ್ದಾಣದ ಎದುರು ತಲೆಯೆತ್ತುತ್ತಿರುವ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ದೇಶ ಕಾಯುವ ಯೋಧರ ಠೇವಣಿಗಳ ಮೇಲೆ 0.50%, ಮಹಿಳೆಯರಿಗೆ 0.25%, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ 0.50% ಅಧಿಕ ಬಡ್ಡಿಯನ್ನು ನೀಡಲಿದೆ. 99 ತಿಂಗಳುಗಳಲ್ಲಿ ದ್ವಿಗುಣಗೊಳ್ಳುವ ಎವಿಜಿ ಕ್ಯಾಶ್ ಸರ್ಟಿಫಿಕೇಟ್‌ನ ಜೊತೆಗೆ ಆರ್.ಡಿ. ಠೇವಣಿ ಮತ್ತು ನಿರಖು ಠೇವಣಿಗಳ ಮೇಲೆ ಆಕರ್ಷಕ ಬಡ್ಡಿಯನ್ನು ನೀಡಲಿದೆ. ಇತರ ವಿವಿಧ ಸಾಲ ಸೌಲಭ್ಯಗಳೂ ಲಭ್ಯವಿರಲಿವೆ.
ಲೋಕಾರ್ಪಣೆಯ ಬಾಬು ವಿಶೇಷ ಬಡ್ಡಿ ಯೋಜನೆ
2025ರ ವರ್ಷಾಂತ್ಯದೊಳಗೆ ಇರಿಸಲಾಗುವ ಎಲ್ಲಾ ಠೇವಣಿಗಳಿಗೆ 0.25% ಅಧಿಕ ಬಡ್ಡಿಯನ್ನು ನೀಡಲಾಗುತ್ತದೆ.
ಆಡಳಿತ ಮಂಡಳಿ
ನೂತನ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೃಷಿಕರೂ, ಉದ್ಯಮಿಯವರೂ ಆಗಿರುವ ರೊಟೇರಿಯನ್ ಶ್ರೀ ಕಳುವಾಜಿ ವೆಂಕಟ್ರಮಣ ಗೌಡ, ಉಪಾಧ್ಯಕ್ಷರಾಗಿ ನಿವೃತ್ತ ಕಚೇರಿ ಅಧೀಕ್ಷಕರು, ಕೃಷಿಕರು ಮತ್ತು ಉದ್ಯಮಿಯವರೂ ಆಗಿರುವ ರೊಟೇರಿಯನ್ ಶ್ರೀ ಉಮೇಶ್ ಮಳುವೇಲು, ನಿರ್ದೇಶಕರುಗಳಾಗಿ ಇಂಜಿನಿಯರ್, ಶಿಕ್ಷಣದಾತ ಮತ್ತು ಸಂಘಟಕರಾಗಿರುವ ರೊಟೇರಿಯನ್ ಶ್ರೀ ಎ.ವಿ. ನಾರಾಯಣ. ನಿವೃತ್ತ ಉಪನ್ಯಾಸಕ ಮತ್ತು ಉತ್ತಮ ಯಕ್ಷಗಾನ ತಾಳಮದ್ದಳೆ ಪಟುವಾಗಿರುವ ಜೇಸೀ ಶ್ರೀ ಗುಡ್ಡಪ್ಪ ಗೌಡ ಬಲ ನಿವೃತ್ತ ಪ್ರಾಂಶುಪಾಲರು ಮತ್ತು ರಾಷ್ಟ್ರೀಯ ತರಬೇತುದಾರರಾಗಿರುವ ಜೇಸೀ ಶ್ರೀ ಸೀತಾರಾಮ ಕೇವಳ, ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀ ಗಂಗಯ್ಯ ಗೌಡ ತಾಳಿಪಡ್ಡು, ಮಾದರಿ ಕೃಷಿಕ ಶ್ರೀ ಜಯಪ್ರಕಾಶ ಕಳುವಾಜೆ, ಕ್ಲಾಸ್-1 ವಿದ್ಯುತ್ ಗುತ್ತಿಗೆದಾರ ಮತ್ತು ಯೋಗ ತರಬೇತುದಾರ ರೊಟೇರಿಯನ್ ಶ್ರೀ ಹಲಂಗ ಸುಂದರ ಗೌಡ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪದ್ಮಪ್ಪ ಗೌಡ ಕೆ. ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರೊಟೇರಿಯನ್ ಶ್ರೀ ಮಾಧವ ಪರಿಯತ್ತೋಡಿ, ಕೃಷಿಕರು, ಸಮಾಜಸೇವಕರು ಮತ್ತು ಉದ್ಯಮಿಯವರಾಗಿರುವ ಶ್ರೀ ಮೋಹನ್ ಜಿ. ಕೃಷಿಕರಾಗಿರುವ ಶ್ರೀಮತಿ ವೇದಾವತಿ ಶೀನಪ್ಪ ಗೌಡ ಬೈತ್ತಡ್ಕ, ನ್ಯಾಯವಾದಿಯವರಾಗಿರುವ ಶ್ರೀಮತಿ ಉಷಾಲಕ್ಷ್ಮೀ ಉಮೇಶ್ ಮತ್ತು ಕೃಷಿಕರಾಗಿರುವ ಶ್ರೀ ಎ.ವಿ. ಗಂಗಾಧರ ಗೌಡ ಅವರು ಸೇವೆಗೈಯಲಿದ್ದಾರೆ.
























