ಅಂಬಿಕಾ ವಿದ್ಯಾಲಯದ ಮಂದಿರಾ ಕಜೆ ಹಾಗೂ ಸಾತ್ವಿಕ್ ಜಿ. ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಥಾನವು ಹೈದರಾಬಾದ್ನಲ್ಲಿ ಏರ್ಪಡಿಸಿದ ಝೋನಲ್ ಹಂತದ ಗಣಿತ ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಿಶೋರ ವರ್ಗದ ಗಣಿತ ಮಾದರಿ ಪ್ರದರ್ಶನದಲ್ಲ್ರಿ 9ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಜಿ. ಪ್ರಥಮ ಸ್ಥಾನ, ಕಿಶೋರ ವರ್ಗದ ವಿಜ್ಞಾನ ಪತ್ರ ವಾಚನ ಸ್ಪರ್ಧೆಯಲ್ಲಿ 10ನೇತರಗತಿ ವಿದ್ಯಾರ್ಥಿನಿ ಮಂದಿರಾ ಕಜೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಗಣಿತ ಮಾದರಿ ಸ್ಪರ್ಧೆ ಪಂಜಾಬಿನ ಸರ್ವಹಿತಕಾರ್ಯ ಕೇಶವ ವಿದ್ಯಾನಿಕೇತನ ವಿದ್ಯಾಧಾಮ ಜಲಂಧರದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದ ವಿಜ್ಞಾನ ಪತ್ರವಾಚನ ಸ್ಪರ್ಧೆ ಉತ್ತರ ಪ್ರದೇಶದ ಮೀರತ್ ಬಾಲೆ ರಾಮ ಬ್ರಿಜಭೂಷಣ ಸರಸ್ವತಿ ಶಿಶುಮಂದಿರದಲ್ಲಿ ಜರಗಲಿದೆ.





















































 
 

error: Content is protected !!
Scroll to Top