ಚರ್ಮ ಹಾಗೂ ಮಕ್ಕಳ ತಪಸಣಾ ಕ್ಲಿನಿಕ್ ಬೆಂಕಿಗಾಹುತಿ

ಕಾಸರಗೋಡು: ಇಲ್ಲಿನ ಅಶ್ವಿನಿ ನಗರದಲ್ಲಿರುವ ಚರ್ಮ ಹಾಗೂ ಮಕ್ಕಳ ತಪಾಸಣಾ ಕ್ಲಿನಿಕ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 25 ಲಕ್ಷ ರೂ. ನಷ್ಟವಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

ನಾಲ್ಕು ಕೋಣೆಗಳನ್ನು ಹೊಂದಿರುವ ಕ್ಲಿನಿಕ್ ನೊಳಗೆ ದಟ್ಟ ಹೊಗೆಯು ಕಾರ್ಯಾಚರಣೆಗೆ ಅಡಚಣೆಯಾದರೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಲಿನಿಕ್ ನಲ್ಲಿದ್ದ ಫ್ಯಾನ್, ಕಂಪ್ಯೂಟರ್ ಗಳು, ಫರ್ನಿಚರ್, ಫ್ರಿಡ್ಜ್, ಕ್ಲಿನಿಕ್ ಉಪಕರಣಗಳು, ಔಷಧಿಗಳು, ಎ.ಸಿ ಮೊದಲಾದವು ಬೆಂಕಿಗಾಹುತಿಯಾಗಿದೆ.

ಈ ಕಟ್ಟಡದಲ್ಲಿ ಹೊಟೇಲ್, ಕಂಪ್ಯೂಟರ್ ಸಂಸ್ಥೆ, ದಂತ ಚಿಕಿತ್ಸಾಲಯ, ಹಣಕಾಸು ಸಚಿವಾಲಯ, ಲಾಡ್ಜಿಂಗ್ ಮೊದಲಾದ 15 ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಈ ಕಟ್ಟಡದ ಕೆಳ ಅಂತಸ್ತಿನಲ್ಲಿ ಕ್ಲಿನಿಕ್ ಕಾರ್ಯಾಚರಿಸುತ್ತಿದೆ. ಸುಮಾರು 25 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.





















































 
 

error: Content is protected !!
Scroll to Top