ಮಂಗಳೂರು: ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ವಿಭಾಗವು 2025 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಕಡಬ ತಾಲೂಕಿನ ದ.ಕ.ಜಿ. ಪಂ.ಹಿ ಪ್ರಾ. ಶಾಲೆ ಗೋಳಿಯಡ್ಕ, ರಂಜಿಲಾಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದ ಉದ್ಘಾಟನೆ ಸೆ. 23 ರಂದು ಅಪರಾಹ್ನ 2.30ಕ್ಕೆ ನಡೆಯಲಿದ್ದು, ಸಂಸ್ಥೆ ಮುಖ್ಯ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ರೆಂಜಿಲಾಡಿ ಬೀಡಿನ ಅರಸರಾದ ಶ್ರೀ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆರು ದಿನಗಳ ಕಾಲ ವಿದ್ಯಾರ್ಥಿಗಳಿಂದ ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಿದೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಾರ್ಜ್ ಟಿ ಎಸ್ ಪ್ರಾಂಶುಪಾಲರು ಬೆಥನಿ ಪದವಿಪೂರ್ವ ಕಾಲೇಜು ನೂಜಿ ಬಾಳ್ತಿಲ, ಡಾ.ತ್ರಿಮೂರ್ತಿ ನಿವೃತ್ತ ವೈದ್ಯಾಧಿಕಾರಿಗಳು ಕಡಬ, ಶ್ರೀ ಪ್ರವೀಣ್ ಕುಂಟ್ಯಾನ ಪ್ರಗತಿಪರ ಕೃಷಿಕರು, ಶ್ರೀ ಜಯಪ್ರಕಾಶ ಪೆತ್ತಲ ಯುವ ಕೃಷಿಕರು, ಮಾನಸ ನೃತ್ಯ ತರಬೇತುದಾರರು, ರಾಮಾಂಜಿ ರಂಗಭೂಮಿ ಕಲಾವಿದರು ಭಾಗವಹಿಸಲಿದ್ದಾರೆ.
ಆರು ದಿನಗಳ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಸುರೇಶ್ ಗೌಡ ಬೈಲು, ಕೇಶವ ಅಮೈ, ಶಿವರಾಮ ಏನೆಕಲ್ಲು, ಚಂದ್ರಶೇಖರ ಗೌಡ ಹಳೆನೂಜಿ, ಚಂದ್ರಶೇಖರ ಕೋಡಿಬೈಲು, ರಾಜೇಂದ್ರ ಪಲಯನಡ್ಕ, ಶ್ರಿಮತಿ ಆಶಾ ತಿಮ್ಮಪ್ಪ ಗೌಡ, ಗಣೇಶ್ ಕೈಕುರೆ, ಮಹಮ್ಮದ್ ರಫೀಕ್ ದಾರಿಮಿ, ರೆ.ಪಾ.ಡಾ.ವರ್ಗೀಸ್, ಕೃಷ್ಣ ಶೆಟ್ಟಿ ಕಡಬ, ಪಿ.ಪಿ. ವರ್ಗೀಸ್, ಚಿದಾನಂದ ಬೈಲಾಡಿ, ಗಣೇಶ್ ನಡುವಾಲು, ಹರೀಶ್ ಇಂಜಾಡಿ, ಅಭಿಲಾಷ್ ಪಿ.ಕೆ,ಉಮೇಶ್ ಶೆಟ್ಟಿ ಸಾಯಿರಾಂ, ಅನಿಲ್ ಈಶೋ ಸೇರಿದಂತೆ ಹಲವಾರು ಗಣ್ಯರು, ಊರಿನ ವಿದ್ಯಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಧಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
























