ಹ್ಯಾಂಡ್‌ಶೇಕ್‌ ನೀಡದೆ ಮತ್ತೊಮ್ಮೆ ಪಾಕಿಸ್ತಾನ ತಂಡವನ್ನು ಅವಮಾನಿಸಿದ ಭಾರತ

ಹೈ ವೋಲ್ಟೇಜ್‌ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದು ಬೀಗಿದ ಟೀಮ್‌ ಇಂಡಿಯಾ

ದುಬೈ: ಏಷ್ಯಾಕಪ್​ ಟೂರ್ನಿಯ ಭಾನುವಾರ ರಾತ್ರಿ ನಡೆದ 14ನೇ ಪಂದ್ಯದಲ್ಲೂ ಪಾಕಿಸ್ತಾನ ತಂಡಕ್ಕೆ ಭಾರತ ಅವಮಾನ ಮಾಡಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಅವರನ್ನು ಮತ್ತೊಮ್ಮೆ ಹ್ಯಾಂಡ್‌ಶೇಕ್ ನೀಡದೆ ನಿರ್ಲಕ್ಷಿಸಿ ಅವಮಾನಿಸಿದ್ದಾರೆ.

ಸೆಪ್ಟೆಂಬರ್ 14ರಂದು ನಡೆದ ಪಂದ್ಯದ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ನಾಯಕನೊಂದಿಗೆ ಶೇಕ್ ಹ್ಯಾಂಡ್ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ಕೂಡ ಪಾಕ್ ಆಟಗಾರರಿಗೆ ಹಸ್ತಲಾಘವ ನೀಡದೆ ಹೊರ ನಡೆದಿದ್ದರು.





















































 
 

ಈ ಅವಮಾನವನ್ನು ಮುಂದಿಟ್ಟು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾಕಪ್ ಟೂರ್ನಿಯಿಂದ ಹೊರನಡೆಯುವ ಗೊಡ್ಡು ಬೆದರಿಕೆಯೊಡ್ಡಿತ್ತು. ಮತ್ತೊಮ್ಮೆ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ತಂಡದ ನಾಯಕನಿಗೆ ಶೇಕ್ ಹ್ಯಾಂಡ್ ನೀಡದೆ ಹೊರನಡೆದು ದಿಟ್ಟ ನಿಲುವು ಪ್ರದರ್ಶಿಸಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಪಾಕ್ ಪ್ರೇರಿತ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯಿಂದಾಗಿ 26 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯನ್ನು ಖಂಡಿಸಿ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ.

ಏಷ್ಯಾಕಪ್ ಟೂರ್ನಿಯ ಈ 14ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಸಿಡಿಸಿದರು. ಈ ಮೂಲಕ ಭಾರತ ತಂಡ 18.5 ಓವರ್​ಗಳಲ್ಲಿ 174 ರನ್ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಅಭಿಷೇಕ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಶತಕದ ಜೊತೆಯಾಟ, ಕೊನೆಯಲ್ಲಿ ತಿಲಕ್‌ ವರ್ಮಾ ತಾಳ್ಮೆಯ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ ಪಾಕ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171‌ ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ಜಯ ಸಾಧಿಸಿತು.

ಪತರುಗುಟ್ಟಿದ ಪಾಕ್‌

ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೊಡಿ ಮೊದಲ ಎಸೆತದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಕೇವಲ 8.4 ಓವರ್‌ಗಳಲ್ಲೇ 100 ರನ್‌ ಪೂರೈಸಿದ್ದ ಈ ಜೋಡಿ, ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿತ್ತು. ಈ ವೇಳೆ ಅಬ್ಬರಿಸುತ್ತಿದ್ದ ಗಿಲ್‌ 47 ರನ್‌ (28 ಎಸೆತ, 8 ಬೌಂಡರಿ) ಚಚ್ಚಿ ಫಹೀಮ್‌ ಅಶ್ರಫ್‌ಗೆ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಹ್ಯಾರಿಸ್‌ ರೌಫ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಶೂನ್ಯಕ್ಕೆ ಔಟಾದರು.

ಇವರಿಬ್ಬರ ವಿಕೆಟ್‌ ಬಳಿಕವೂ ಅಭಿಷೇಕ್‌ ಶರ್ಮಾ ತನ್ನ ಬ್ಯಾಟಿಂಗ್‌ ಆರ್ಭಟ ಮುಂದುವರಿಸಿದರು. ಪಾಕಿಸ್ತಾನದ ಟಾಪ್‌ ಬೌಲರ್‌ಗಳೇ ಪತರುಗುಟ್ಟುವಂತೆ ಮಾಡಿದರು. ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಅಭಿ 13ನೇ ಓವರ್‌ನಲ್ಲಿ ಅಬ್ರಾರ್‌ ಅಹ್ಮದ್‌ಗೆ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಸಿಡಿಸಲು ಯತ್ನಿಸಿ ಔಟಾದರು. ಸ್ಫೋಟಕ ಪ್ರದರ್ಶನ ನೀಡಿದ ಶರ್ಮಾ 39 ಎಸೆತಗಳಲ್ಲಿ 74 ರನ್‌ (5 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

ಬಳಿಕ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದ ತಿಲಕ್‌ ವರ್ಮಾ ಗೆಲುವಿನ ದಡ ಸೇರಿಸಿದರು. ತಿಲಕ್‌ ಅಯೇಯ 30 ರನ್‌ (19 ಎಸೆತ, 2 ಸಿಕ್ಸರ್‌, 2 ಬೌಂಡರಿ), ಸಂಜು ಸ್ಯಾಮ್ಸನ್‌ 13 ರನ್‌, ಗಳಿಸಿದ್ರೆ, ಹಾರ್ದಿಕ್‌ ಪಾಂಡ್ಯ ಅಜೇಯ 7 ರನ್‌ ಗಳಿಸಿದರು.

ಪಾಕಿಸ್ತಾನ ಪರ ಹ್ಯಾರಿಸ್‌ ರೌಫ್‌ 2 ವಿಕೆಟ್‌ ಕಿತ್ತರೆ, ಅಬ್ರಾರ್‌ ಅಹ್ಮದ್‌, ಫಹೀಮ್‌ ಅಶ್ರಫ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಪಾಕ್‌ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕದ ನೆರವಿನಿಂದ 171 ರನ್ ಗಳಿಸಿತ್ತು. ಆರಂಭಿಕನಾಗಿ ಕಣಕ್ಕಿಳಿದ ಫರ್ಹಾನ್ 45 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿ ಸಹಿತ 58 ರನ್ ಗಳಿಸಿ ಔಟಾದರು. ಇದರೊಂದಿಗೆ ಸೈಮ್ ಅಯೂಬ್ 21 ರನ್, ಫಖರ್ ಝಮಾನ್ 15 ರನ್, ಹುಸೇನ್ ಟಲಟ್ 10 ರನ್, ಮೊಹಮದ್ ನವಾಜ್ 21 ರನ್, ಸಲ್ಮಾನ್ ಅಘಾ 17 ರನ್ ಗಳಿಸಿದ್ರೆ ಕೊನೆಯಲ್ಲಿ ಫಹೀಮ್ ಅಶ್ರಫ್ ಸ್ಫೋಟಕ 20 ರನ್ ಚಚ್ಚಿದರು.

ಭಾರತ ಕಳಪೆ ಫೀಲ್ಡಿಂಗ್

8 ಓವರ್‌ಗಳಲ್ಲಿ ಅಭಿಷೇಕ್ ಶರ್ಮಾ 3, ಕುಲ್ದೀಪ್ ಯಾದವ್ 1, ಮಿಸ್‌ಫೀಲ್ಡಿಂಗ್‌ನಿಂದಾಗಿ 5 ಕ್ಯಾಚ್ ಕೈಚೆಲ್ಲಲಾಗಿತ್ತು. ಇದು ಸಾಲದು ಅಂತ 19ನೇ ಓವರ್‌ನ 5ನೇ ಎಸೆತದಲ್ಲಿ ಶುಭಮನ್ ಗಿಲ್ ಕೈಗೆ ಬಂದ ಸುಲಭ ಕ್ಯಾಚ್‌ ಕೈಚೆಲ್ಲಿದರು. ಇದು ಪಾಕ್‌ಗೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಯಿತು. ಟೀಂ ಇಂಡಿಯಾ ಪರ ಶಿವಂ ದುಬೆ 2 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ, ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪಾಕ್ ಪಡೆಯನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲಿಸಿತ್ತು. ದುಬೈನಲ್ಲೇ ನಡೆದಿದ್ದ ಈ ಮ್ಯಾಚ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು 20 ಓವರ್​ಗಳಲ್ಲಿ ಕೇವಲ 129 ರನ್ ಮಾತ್ರ ಕಲೆಹಾಕಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ 15.5 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.

error: Content is protected !!
Scroll to Top