ಕಟ್ಟಡ ಕಾರ್ಮಿಕ ಸಂಘದಿಂದ ಕುಂಜೂರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ್ನ

ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮತ್ತು ಕರ್ಣಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ ಅನುರಾಗ ವಠಾರ ಪುತ್ತೂರು ಇದರ ವತಿಯಿಂದ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸ್ವಚ್ಚತಾ ಶ್ರಮಸೇವೆ ನಡೆಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಶ್ರಮದಾನ ಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರ ಪರವಾಗಿ ಸಂಘದ ಅಧ್ಯಕ್ಷರಿಗೆ ಹಾಗೂ ಕಾಯಾದ್ಯಕ್ಷರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಶ್ರಮದಾನ ಸೇವೆಯಲ್ಲಿ ಜಿಲ್ಲಾಧ್ಯಕ್ಷ ರಾಜೇಶ್ ಪೂಜಾರಿ ಮುಕ್ವೆ, ಕಾರ್ಯಧ್ಯಕ್ಷ ಎಮ್. ಶೇಷಪ್ಪ ಕುಲಾಲ್, ಸಲಹೆಗಾರ ಕೆ. ಜಯರಾಮ ಕುಲಾಲ್, ಕೋಶಾಧಿಕಾರಿ ಈಶ್ವರ ನಾಯ್ಕ ಅಜಲಾಡಿ, ಉಪಾಧ್ಯಕ್ಷ ವಿಶ್ವನಾಥ ಬೆಳ್ಳಿಪ್ಪಾಡಿ, ಜತೆ ಕಾರ್ಯದರ್ಶಿಗಳಾದ ಚೆನ್ನಪ್ಪ ಮಚ್ಚಿಮಲೆ, ಅಶೋಕ್ ಮುಂಡೂರು ಹಾಗೂ ಸಂಘದ ಸದಸ್ಯರು ಹಾಜರಿದ್ದರು. ಬೆಳಗಿನ ಉಪಹಾರ ಮತ್ತು ಮದ್ಯಾಹ್ನದ ಭೋಜನವನ್ನು ದೇವಸ್ಥಾನದ ವತಿಯಿಂದ ನೀಡಲಾಯಿತು.





















































 
 
error: Content is protected !!
Scroll to Top