ಪ್ರಧಾನಮಂತ್ರಿ ನರೇಂದ್ರ ಮೋದಿ 75ನೇ ಹುಟ್ಟುಹಬ್ಬ | ಬಿಜೆಪಿ ಸೇವಾ ಪಾಕ್ಷಿಕವಾಗಿ ಅ.2 ರ ತನಕ ವಿವಿಧ ಸೇವಾ ಚಟುವಟಿಕೆ

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಬಿಜೆಪಿ ಸೇವಾ ಪಾಕ್ಷಿಕವಾಗಿ ಅ.೨ರ ತನಕ ನಡೆಯುವ ವಿವಿಧ ಸೇವಾ ಚಟುವಟಿಗಳಿಗೆ ಪೂರಕವಾಗಿ ಸೆ.೨೦ರಂದು ಕಲ್ಲೇಗ ದೈವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
14ದಿವಸ ನಿರಂತರ ಕಾರ್ಯಕ್ರಮ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನವನ್ನು ಸೇವಾ ಚಟುವಟಿಕೆಯ ಮೂಲಕ ಸೇವಾ ಪಾಕ್ಷಿಕ ಕಾರ್ಯಕ್ರಮವಾಗಿ ೧೪ ದಿವಸ ನಿರಂತರ ಕಾರ್ಯಕ್ರಮ ನಡೆಯಲಿದೆ. ಸಮಾಜದ ದೀನ ದಲಿತ, ದುರ್ಬಲ ಅನಾರೋಗ್ಯ ಪೀಡಿತರಿಗೆ ನೆರವು, ಸಾರ್ವಜನಿಕ ಪರಿಸರದ ಬಗ್ಗೆ ಕಾಳಜಿ ವಹಿಸಿ ಹತ್ತಾರು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ವಸಂತಲಕ್ಷ್ಮೀ, ಸತೀಶ್ ನಾಕ್ ಕಾರ್ಯದರ್ಶಿ ಶಶಿಧರ್ ನಾಯಕ್,
ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ ಶಗ್ರಿತ್ತಾಯ, ಆಶಾ ಭಗವಾನ್, ಯುವ ಮೋರ್ಚಾ ಅಧ್ಯಕ್ಷ ನಿತೇಶ್ ಕಲ್ಲೇಗ, ನಗರಸಭಾ ಸದಸ್ಯರಾದ ಗೌರಿ ಬನ್ನೂರು, ಕೆ.ಜೀವಂಧರ್ ಜೈನ್, ಶಕ್ತಿ ಕೇಂದ್ರದ ಪ್ರಮುಖ್ ನಾಗೇಂದ್ರ ಬಾಳಿಗ, ಪ್ರಮುಖರಾದ ನಿರಂಜನ್, ಪುತ್ತೂರು ಕೋ ಓಪರೇಟಿವ್ ಬ್ಯಾಂಕ್ನ ನಿರ್ದೇಶಕ ಶ್ರೀಧರ ಪಟ್ಲ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದಯಾನಂದ ಕರ್ಮಲ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸಂಜೀವ ಗಾಣಿಗ, ಜಯ ಕಾರೆಕ್ಕಾಡು, ಸುಮತಿ, ಶೇಸಮ್ಮ, ಸುಪ್ರಬಾ, ಹೇಮಾವತಿ, ರಕ್ತೇಶ್ವರಿ ವಠಾರದ ಶಶಿಧರ್ ಸಪಲ್ಯ ಉಪಸ್ಥಿತರಿದ್ದರು.

error: Content is protected !!
Scroll to Top