ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ

ಜಿಎಸ್‌ಟಿ ಕಡಿತ, ಅಮೆರಿಕ ವಿಸಾ ವಿಚಾರ ಪ್ರಸ್ತಾವ ಸಾಧ್ಯತೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿಯವರ ಭಾಷಣವು ಜಿಎಸ್ಟಿ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹೊಸ ಜಿಎಸ್​ಟಿ 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಮಹತ್ವದ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುಜವ ನಿರೀಕ್ಷೆಯಿದೆ.

H1 B ವೀಸಾ ಹೊಂದಿರುವವರ ಮೇಲೆ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮದ ಬಗ್ಗೆಯೂ ಮೋದಿ ಮಾತನಾಡುವ ಸಾಧ್ಯತೆಯಿದೆ. ಈ ಕ್ರಮವು ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯ ಟೆಕ್ಕಿಗಳ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಭಾರತ ಹಾಗೂ ಅಮರಿಕದ ನಡುವಿನ ಸುಂಕ ವಿವಾದ ಹೆಚ್ಚಾಗಿದೆ.





















































 
 

ಅಮೆರಿಕವು ಭಾರತದ ಮೇಲೆ ಶೇ.50ರಷ್ಟು ಆಮದು ಶುಲ್ಕವನ್ನು ವಿಧಿಸಿದೆ. ಅಷ್ಟೇ ಅಲ್ಲದೆ ಎಚ್​​1ಬಿ ವೀಸಾದ ಶುಲ್ಕವನ್ನು 1 ಲಕ್ಷ ಡಾಲರ್​​ಗೆ ಹೆಚ್ಚಿದೆ. ಇದು ವಾರ್ಷಿಕ ಶುಲ್ಕವಲ್ಲ ಒಮ್ಮೆ ಪಾವತಿಸುವಂಥಾ ಶುಲ್ಕ, ಹಾಗೆಯೇ ಈಗಾಗಲೇ ವೀಸಾ ಪಡೆದು ಬೇರೆ ದೇಶಕ್ಕೆ ಹೋಗಿರುವವರಿಗೆ ಇನ್ಯಾವತ್ತೋ ಬಂದರೆ ಅವರಿಗೆ ಮತ್ತೆ ಶುಲ್ಕ ವಿಧಿಸುವುದಿಲ್ಲ. ಅವರು ಯಾವಾಗ ಬೇಕಾದರೂ ದೇಶಬಿಟ್ಟು ಹೋಗಬಹುದು, ದೇಶಕ್ಕೆ ಮರಳಬಹುದು ಎಂದು ಟ್ರಂಪ್ ಹೇಳಿದ್ದಾರೆ.

error: Content is protected !!
Scroll to Top