ಅಡಿಕೆ ಕಳ್ಳತನ ಮಾಡಿದ ಆರೋಪಿಗಳ ಬಂಧನ

ಸುಳ್ಯ: ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ಸುಪ್ರಿತ್ ಕೆ(22) ಹಾಗೂ ಜಾಲ್ಕೂರು ಗ್ರಾಮ ಸುಳ್ಯ ತಾಲೂಕು ಮಹಮ್ಮದ್ ಸಿನಾನ್21) ಎಂದು ಗುರುತಿಸಲಾಗಿದೆ.

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಞಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕಮಹಮ್ಮದ್ ರಫೀಕ್ ಎಸ್ ಡಿ ರವರ ಬಾಬ್ತು ಅಡಿಕೆ ಸಂಗ್ರಹಿಸುವ ಗೋಡಾನ್ನಿಂದ 12.09.2025ರಂದು ರಾತ್ರಿ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಳ್ಯ ಪೊಲೀಸ್ ಪ್ರಕರಣ ದಾಖಾಲಾಗಿರುತ್ತದೆ.

ಈ ಬಗ್ಗೆ ತನಿಖೆ ನಡೆಸಲಾಗಿ ಪ್ರಕರಣದ ಇಬ್ಬರು ಆರೋಪಿಗಳನ್ನು 19 ರಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಮುರೂರು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದು, ಆರೋಪಿಗಳು ಕಳುವು ಮಾಡಿದ 1 ಕ್ವಿಂಟಲ್ ಸುಲಿದ ಅಡಿಕೆ ಸಾಗಾಟ ಮಾಡಲು ಉಪಯೋಗಿಸಿರುವ ಕೆಎ 21 ಸಿ 5862ನೇ ನಂಬ್ರದ ಆಟೋ ರಿಕ್ಷಾವನ್ನು ಸ್ವಾದೀನಪಡಿಸಿಕೊಂಡು ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





















































 
 
error: Content is protected !!
Scroll to Top