ಅ.8ರಿಂದ ಎರಡನೇ ಅವಧಿಯ ತರಗತಿಗಳು ಆರಂಭ
ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ದಸರಾ ರಜೆ ಆರಂಭವಾಗಿದ್ದು, ಅ.7ರವರೆಗೆ ರಜೆ ಇರಲಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಇಲಾಖೆಯು 2025-26ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ರಜೆಗಳು ಮತ್ತು ಶಾಲಾ ಚಟುವಟಿಕೆಗಳ ಸಂಪೂರ್ಣ ಮಾರ್ಗದರ್ಶಿಯನ್ನು ಈಗಾಗಲೇ ಪ್ರಕಟಿಸಿದೆ. ಈ ಮಾರ್ಗದರ್ಶಿಯ ಪ್ರಕಾರ ದಸರಾ ರಜೆ ನೀಡಲಾಗಿದೆ. ಅ.8ರಿಂದ ಶಾಲೆಗಳ ಎರಡನೇ ಅವಧಿಯ ತರಗತಿಗಳು ಆರಂಭವಾಗಲಿದೆ. ಈ ಎರಡನೆ ಅವಧಿಯು 2026ರ ಎ.10ರ ವರೆಗೆ ಮುಂದುವರಿಯಲಿದೆ.
























