ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ

ರೂ 153’556.21 ನಿವ್ವಳ ಲೀ ಗೇ 74 ಪೈಸೆ ಬೋನಸ್ ಶೇಕಡ 10 ಡಿವಿಡೆಂಟ್

ಪುತ್ತೂರು : ಶಾಂತಿಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸೆಪ್ಟೆಂಬರ್ 16ರಂದು ಸಂಘದ ಆವರಣದಲ್ಲಿ ನಡೆಯಿತ

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪ್ರವೀಣ್ ಶೆಟ್ಟಿ ಮಾತನಾಡಿ ಸಂಘದಲ್ಲಿ 99118.78 ಲೀ ಹಾಲು ಖರೀದಿ ಹಾಗೂ 5831.50 ಲೀ ಸ್ಥಳೀಯವಾಗಿ ಹಾಲು ಮಾರಾಟ ಮಾಡಲಾಗಿದೆ ಸಂಘವು ರೂ 3,53,479.36 ಹಾಲು ವ್ಯಾಪಾರ ಲಾಭ ರೂ 25,496.42 ಪಶುಆಹಾರ ಮತ್ತು ಲವಣ ಮಿಶ್ರಣ ಲಾಭ ಪಡೆದು ಒಟ್ಟು 153,556.21 ರೂ ನಿವ್ವಳ ಲಾಭಗಳಿವೆ. ಸದಸ್ಯರಿಗೆ ಲೀ ಗೇ 0.74 ಪೈಸೆ ಭೋನಸ್ 10 ಶೇ ಡಿವಿಡೆಂಟ್ ನೀಡಲಾಗುವುದು ಎಂದರು ಎಲ್ಲಾ ಯೋಜನೆ ಸೌಲಭ್ಯಗಳನ್ನು ಬಳಸಿಕೊಂಡು ಹೈನುಗಾರಿಕೆಯನ್ನು ಹೆಚ್ಚಳ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಿ ಎಂದರು ದ. ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀ ದೇವಿ ಮಾತನಾಡಿ ಹಾಲು ಪೂರೈಕೆಯ ಮಾಹಿತಿ ನೀಡುವ ಆಪ್ ಅನ್ನು ಎಲ್ಲರು ಇನ್ಸ್ಟಾಲ್ ಮಾಡಿಸಿ ಮತ್ತು ಹೆಚ್ಚಾಗಿ ನಂದಿನಿ ಪಶು ಆಹಾರ ಬಳಕೆ ಮಾಡಿ ಒಕ್ಕೂಟದಿಂದ ಹೈನುಗಾರಿಕೆ ಸಿಗುವ ಸೌಲಭ್ಯವನ್ನು ತಿಳಿಸಿದರು. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ತಂದು ಸಹಕರಿಸಿ ಎಂದರು.





















































 
 

ಸಂಘದ ಕಾರ್ಯದರ್ಶಿ ಯಶೋಧ ಎನ್ 2024 25 ನೇ ಸಾಲಿನ ವಾರ್ಷಿಕ ವರದಿಯನ್ನು ಓದಿ ಮಂಜೂರು ಗೊಳಿಸಿದರು, 2024 25 ನೇ ಸಾಲಿನ ನಿವ್ವಳ ಲಾಭ ವಿಲೆವರಿ ಮತ್ತು ವಿತರಣೆಯನ್ನು ತಿಳಿಸಿದರು. 2025-25 ನೇ ಸಾಲಿನ ಯೋಜನೆ, ಕಾರ್ಯಚಟುವಿಟಿಗೆ ಅಂದಾಜು ಆಯವ್ಯಯ ಮಂಡಿಸಿದರು. 2024 25 ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು . ಶ್ರೀಮತಿ ದಿವ್ಯ ಪ್ರಥಮ ಶ್ರೀಮತಿ ನೋಹಿತಾಕ್ಷಿ ದ್ವಿತೀಯ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. 2024 25 ನೇ ಸಾಲಿನಲ್ಲಿ 90 ದಿವಸ ಹಾಲು ಪೂರೈಕೆ ಮಾಡಿದ ಎಲ್ಲಾ ಸದಸ್ಯರಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಪಶು ಸಂಗೋಪನೆ ಇಲಾಖೆಯ ಪಶುಶಖಿ ಶ್ರೀಮತಿ ದ ಸೌಮ್ಯ ದಿನೇಶ್ ಮಾತನಾಡಿ ಇಲಾಖೆಯಿಂದ ಸಿಗುವ ಅನುದಾನ ಮತ್ತು ಉಚಿತವಾಗಿ ಗ್ರಾಮಕ್ಕೆ ಬಂದು ರಾಬಿಸ್ ಚುಚ್ಚುಮದ್ದು ನೀಡಲಾಗುತ್ತಿದೆ ಅದನ್ನು ಜನರು ಸದುಪಯೋಗ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಭಾರತಿ ಓಲಾಡಿ, ಶಶಿಕಲಾ, ಸುಬ್ಬಲಕ್ಷ್ಮಿ, ಸುಮಂಗಲ, ಜಯಂತಿ, ಚಂದ್ರಾವತಿ, ದಿವ್ಯಾ ಜೆ, ಸುಚಿತ್ರ ರೂಪಲತಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ಹಾಲು ಪರೀಕ್ಷಾಕಿ ಶ್ರೀಮತಿ ತುಳಸಿ ಪ್ರಾರ್ಥಿಸಿ ಸಂಘದ ಉಪಾಧ್ಯಕ್ಷೆ ಚಂಪಾವತಿ ಸ್ವಾಗತಿಸಿ, ಸಂಘದ ನಿರ್ದೇಶಕಿ ಶ್ರೀಮತಿ ಭಾರತಿ ವಂದಿಸಿದರು. ಕಾರ್ಯಕ್ರಮದಲ್ಲಿ ಹರೀಶ್ ಗೌಡ ಕರ್ಬಡ್ಕ,ಪ್ರಸಾದ್ ಗೌಡ ಕಕ್ವೆ, ಸತೀಶ್ ಪೂಜಾರಿ ಪರಕಮೆ, ಶರತ್ ಕಕ್ವೆ, ಚೇತನ್ ಕುಮಾರ್ ಕೈಂದಾಡಿ ಸಹಕರಿಸಿದರು

error: Content is protected !!
Scroll to Top