ಮಂಗಳೂರು – ಮಸ್ಕತ್ AIR ವಿಮಾನ ರದ್ದು ಬೇಡ: ಕ್ಯಾ. ಬ್ರಿಜೇಶ್ ಚೌಟ ಮನವಿ

ಮಂಗಳೂರು: ಮಸ್ಕತ್ ಮತ್ತು ಮಂಗಳೂರು ನಡುವಿನ AIR ವಿಮಾನ ಹಾರಾಟವನ್ನು ರದ್ದು ಮಾಡುವ ಪ್ರಸ್ತಾಪ ಸರಿಯಾಗಿಲ್ಲ. ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು AIR ಸಂಸ್ಥೆಗೆ ಸೂಚನೆ ನೀಡುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿ ಪತ್ರ ಬರೆದಿದ್ದಾರೆ.

ಒಮಾನ್‌ನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಕರಾವಳಿ ಭಾಗದ ಜನರು ಉದ್ಯೋಗದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಎರಡೂ ರಾಷ್ಟ್ರಗಳ ನಡುವಿನ ವಿಮಾನ ಹಾರಾಟ ರದ್ದು ಮಾಡಿದರೆ ತೊಂದರೆಯಾಗುತ್ತದೆ. ಹಾಗಾಗಿ ಏಕಾಏಕಿ ವಿಮಾನ ಹಾರಾಟ ರದ್ದು ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಈ ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ AIR ಆಡಳಿತ ವರ್ಗದ ಮನವೊಲಿಸುವಂತೆ ಪತ್ರದಲ್ಲಿ ಹೇಳಲಾಗಿದೆ.





















































 
 
error: Content is protected !!
Scroll to Top