ಸಿಎಂ ‌ಸಿದ್ದರಾಮಯ್ಯರನ್ನು ನಿಂದಿಸಿ ಪೋಸ್ಟ್: ಮಾಜಿ ಯೋಧ ಅರೆಸ್ಟ್

ಹಾಸನ: ಸಿಎಂ ‌ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿದ ಆರೋಪದಡಿ ಸಕಲೇಶಪುರದ ನಿವೃತ್ತ ಯೋಧ ವಸಂತ ಕುಮಾರ್ (40) ಎಂಬವರನ್ನು ಸಿಸಿಬಿ ‌ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಸೇನಾ ನಿವೃತ್ತಿಯ ಬಳಿಕ ವಸಂತ ಕುಮಾರ್ ಅವರು ಸ್ವಗ್ರಾಮದಲ್ಲೇ ಕೃಷಿ ಕಾರ್ಯಗಳನ್ನು ಮಾಡಿಕೊಂಡಿದ್ದರು.

ಸಿ ಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕನ್ನಡ ಬರುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹನುಮ ಭಕ್ತ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವಸಂತ್ ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಕರೆದು, ನಿಂದಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ಮಾಡಿದ ಆಧಾರದಲ್ಲಿ ಅವರನ್ನು ಬಂಧನ ಮಾಡಿರುವುದಾಗಿದೆ.





















































 
 
error: Content is protected !!
Scroll to Top