ಆರು ಸಾವಿರ ಮತದಾರರನ್ನು ಡಿಲೀಟ್‌ ಮಾಡಿಲ್ಲ, ಅರ್ಜಿ ತಿರಸ್ಕರಿಸಲಾಗಿದೆ : ರಾಹುಲ್‌ ಗಾಂಧಿ ಆರೋಪಕ್ಕೆ ಸ್ಪಷ್ಟನೆ

ಆನ್‌ಲೈನ್‌ ಮೂಲಕ ಮತದಾರರ ಹೆಸರು ಅಳಿಸುವುದು ಅಸಾಧ್ಯ ಎಂದ ಚುನಾವಣಾ ಆಯೋಗ

ಬೆಂಗಳೂರು: ಕರ್ನಾಟಕದ ಆಳಂದದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಕುರಿತು ರಾಹುಲ್‌ ಗಾಂಧಿ ಮಾಡಿರುವ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ನಿನ್ನೆ ದೆಹಲಿಯಲ್ಲಿ ರಾಹುಲ್‌ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಅಧಿಕ ಮತಕಳ್ಳತನವಾಗಿದೆ. ಮತದಾರರ ಹೆಸರುಗಳನ್ನು ಆನ್‌ಲೈನ್‌ ಮೂಲಕ ಅಳಿಸಿ ಹಾಕಲಾಗಿದೆ ಎಂದು ಆರೋಪಿಸಿ ಇದಕ್ಕೆ ಇಬ್ಬರು ಸಾಕ್ಷಿಧಾರರನ್ನೂ ಹಾಜರುಪಡಿಸಿದ್ದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಬಿ.ಆರ್‌.ಪಾಟೀಲ್‌ ಗೆದ್ದಿದ್ದರು. ಹೀಗಾಗಿ ರಾಹುಲ್‌ ಗಾಂಧಿಯ ಮತ ಕಳ್ಳತನ ಆರೋಪದ ಬಗ್ಗೆ ಆರಂಭದಲ್ಲೇ ಅನುಮಾನ ಮೂಡಿದೆ.





















































 
 

2023ರ ಆಳಂದ ಕೇಸ್ ವಿಚಾರದಲ್ಲಿ ಈಗಾಗಲೇ FIR ದಾಖಲಾಗಿದೆ. ಫಾರ್ಮ್ 7 ಮೂಲಕ ಆನ್‌ಲೈನ್‌ನಲ್ಲಿ 6,018 ಅಪ್ಲಿಕೇಶನ್ ಬಂದಿತ್ತು. 2022ರ ಡಿಸೆಂಬರ್‌ನಲ್ಲಿ ಗರುಡಾ, VHA ಆ್ಯಪ್ ಮೂಲಕ ಬಂದಿತ್ತು. ದೊಡ್ಡ ಸಂಖ್ಯೆಯಲ್ಲಿ ಅಪ್ಲಿಕೇಶನ್ ಬಂದಾಗ ಸಹಜವಾಗಿ ಅನುಮಾನ ಬಂದು ERO, AERO, BLOಗಳು ಪರಿಶೀಲನೆ ಮಾಡಿದ್ದಾರೆ. ಅದ್ರಲ್ಲಿ ಬರೀ 24 ಅಪ್ಲಿಕೇಶನ್ ಮಾತ್ರ ದಾಖಲೆ ಸರಿಯಾಗಿದ್ವು. 5,994 ತಪ್ಪು ಮಾಹಿತಿಯಿಂದ ಕೂಡಿತ್ತು. ಹೀಗಾಗಿ ಇವೆಲ್ಲವನ್ನು ತಿರಸ್ಕರಿಸಲಾಯಿತು. ಡಿಲೀಟ್ ಮಾಡಲಾಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ‌.

ಅದಾದ ಬಳಿಕ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಯಿತು. ಎಲ್ಲ ರೀತಿಯ ಪರಿಶೀಲನೆ ಮಾಡಿದ ಬಳಿಕ ಮುಖ್ಯ ಚುನಾವಣಾಧಿಕಾರಿ ನೇತೃತ್ವದಲ್ಲಿ ಸಭೆಯೂ ನಡೆಯಿತು. ತನಿಖಾಧಿಕಾರಿ, ಸೈಬರ್ ತಜ್ಞರ ಜೊತೆ ಈ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು ಎಂದು ಸ್ಪಷ್ಟನೆ ನೀಡಿದೆ.

error: Content is protected !!
Scroll to Top