ಮನೆಯಂಗಳದಿಂದ ಗೋವನ್ನು ಕದ್ದ ಆರೋಪಿಗಳು ಪೊಲೀಸ್ ಬಲೆಗೆ

ಮಂಗಳೂರು: ಗೋ ಕಳ್ಳತನ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಅಡ್ಯಾರು ನಿವಾಸಿಗಳಾದ ಶಾಬಾಜ್ ಅಹ್ಮದ್, ವಳಚ್ಚಿಲ್ ಖಾದರ್ ಮೊಹಮ್ಮದ್, ಅರ್ಕುಳ ವಳಚ್ಚಿಲ್ ನಿವಾಸಿ ಮೊಹಮ್ಮದ್ ಸುಹಾನ್ ಎಂದು ಗುರುತಿಸಲಾಗಿದೆ.

ಅಡ್ಯಾರ್‌ನ ತಜಿಪೋಡಿ ನಿವಾಸಿ ಉಮೇಶ್ ಆಳ್ವ ಅವರ ಮನೆಯಿಂದ ಗೋವು ಕಳ್ಳತನವಾದ ಬಗ್ಗೆ ಸೆ. 13 ರಂದು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಗೋವನ್ನು ‌ಜೀವಂತವಾಗಿ ಪತ್ತೆ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.





















































 
 

ಪೊಲೀಸರ ಮಾಹಿತಿಯ ಅನ್ವಯ ಆರೋಪಿಗಳಾದ ಶಾಬಾಜ್ ಮತ್ತು ಸುಹಾನ್ ಗೋವನ್ನು ಕದ್ದು ಖಾದರ್‌ನಿಗೆ ಮಾರಾಟ ಮಾಡಿದ್ದರು. ಖಾದರ್ ಅದನ್ನು ಮಾಂಸಕ್ಕಾಗಿ ಖರೀದಿ ಮಾಡಿದ್ದ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ದನವನ್ನು ಜೀವಂತವಾಗಿ ಪತ್ತೆ ಮಾಡಿದ್ದು, ಆರೋಪಿಗಳನ್ನು ಬಂಧಿಸಿರುವುದಾಗಿದೆ.

error: Content is protected !!
Scroll to Top