ಧರ್ಮಸ್ಥಳ ಪ್ರಕರಣ : ಬಂಗ್ಲೆಗುಡ್ಡೆ ಸ್ಥಳ ಮಹಜರಿಗೆ ಅನುಮತಿ

ವಿಠಲ ಗೌಡ ತಲೆಬುರುಡೆ ಅಡಗಿಸಿಟ್ಟ ಸ್ಥಳದ ಮಹಜರು ಮಾಡಲಿರುವ ಎಸ್‌ಐಟಿ

ಧರ್ಮಸ್ಥಳ : ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧ ಸ್ಥಳ ಮಹಜರು ನಡೆಸಲು ಎಸ್​​ಐಟಿಗೆ ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿದೆ.

ಬಂಗ್ಲೆಗುಡ್ಡೆಯಲ್ಲಿ ವಿಠಲ್ ಗೌಡ ಬುರುಡೆ ತಂದ ಹಾಗೂ ಅಡಗಿಸಿಟ್ಟಿದ್ದ ಸ್ಥಳದ ಸುತ್ತ ಎಸ್​ಐಟಿ ಮಹಜರು ನಡೆಸಲಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದ್ದು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, SOCO ಟೀಮ್ , ಕಂದಾಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಆದರೆ, ಬಂಗ್ಲೆಗುಡ್ಡೆಯಲ್ಲಿ ಭೂಮಿ ಅಗೆದು ಸ್ಥಳ ಪರಿಶೋಧನೆ ಮಾಡಲಾಗುವುದಿಲ್ಲ. ಬದಲಿಗೆ ಸ್ಥಳ ಮಹಜರು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.





















































 
 
error: Content is protected !!
Scroll to Top