ಮಡಿಕೇರಿ: ಈದ್ ಹಬ್ಬದ ಸಂದರ್ಭದಲ್ಲಿ ಗೋವನ್ನು ಕಳ್ಳತನ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಂಡೃಗೇರಿ ಗ್ರಾಮದ ಆಶಿಕ್, ಶಾಹಿದ್ ಮತ್ತು ಹಾರಿಸ್ ಎಂದು ಗುರುತಿಸಲಾಗಿದೆ.
ಮೈತಾಡಿ ಗ್ರಾಮದ ಬೊಳ್ಳಪ್ಪಂಡ ಎಂ. ಭೀಮಯ್ಯ ಎಂಬವರಿಗೆ ಸೇರಿದ ಹಸುವನ್ನು ಆರೋಪಿಗಳು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ನೀಡಲಾದ ದೂರಿನನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿದೆ. ಹಾಗೆಯೇ ಆರೋಪಿಗಳಿಂದ 2600 ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.
























