ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ದಫನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನಾಗಿ ಬಂದು ಇದೀಗ ಶಿವಮೊಗ್ಗ ಜೈಲಿನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯನ ಜಾಮೀನು ಅರ್ಜಿಯ ತೀರ್ಪು ಸೆ.16ರಂದು ಬೆಳ್ತಂಗಡಿ ನ್ಯಾಯಾಲಯ ಪ್ರಕಟಿಸಲಿದೆ.
ಸೆ.12ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪನ್ನು ಸೆ.16ಕ್ಕೆ ಕಾಯ್ದಿರಿಸಿದೆ. ಪ್ರಕರಣದ ವಿಚಾರಣೆ ವೇಳೆ ಎಸ್ಐಟಿಯಿಂದ ಜಾಮೀನು ನೀಡದಂತೆ ಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಿದ್ದರು. ಚಿನ್ನಯ್ಯ ಪರ ಉಚಿತ ಕಾನೂನು ಸೇವಗಳ ಪ್ರಾಧಿಕಾರದ ವಕೀಲರು ವಾದ ಮಂಡಿಸಿದ್ದರು.
ಚಿನ್ನಯ್ಯನ ಬಂಧನದ ದಿನವಾದ ಸೆ.6ರಂದು ಜಾಮೀನು ಅರ್ಜಿ ನೀಡಲಾಗಿತ್ತು. ಇದರ ವಿಚಾರಣೆಯನ್ನು ಸೆ.9, ಬಳಿಕ ಸೆ.12ಕ್ಕೆ ನ್ಯಾಯಾಲಯ ಮುಂದೂಡಿ ಸೆ.16ರಂದು ತೀರ್ಪು ಪ್ರಕಟಿಸುವ ಕುರಿತು ತಿಳಿಸಿದೆ.
























