ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ದೊರೆಯುತ್ತಿದ್ದು, ಬಂಗ್ಲೆಗುಡ್ಡದ ರಹಸ್ಯಗಳು SIT ಅಧಿಕಾರಿಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ ಎನ್ನಬಹುದು.
ತಲೆಬುರುಡೆಗಳ ಮೂಲವನ್ನು ತಿಳಿಯಲು ಹೋದ ಅಧಿಕಾರಿಗಳಿಗೆ ಸ್ಥಳದಲ್ಲಿ ಮಾನವನ ದೇಹದ ಅವಶೇಷಗಳು, ಮಗುವಿನದ್ದು ಎನ್ನಲಾಗುವ ಮೂಳೆಗಳು, ವಾಮಾಚಾರ ನಡೆದಿದೆ ಎನ್ನುವಂತೆ ಅಲ್ಲಿ ದೊರೆತ ಕೆಲವು ಪರಿಕರಗಳು ಶಾಕ್ ನೀಡಿವೆ. ಸದ್ಯ ಅದೇ ಆಯಾಮದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿರುವುದು ಕಂಡು ಬಂದಿದೆ. ಸುತ್ತಮುತ್ತಲ ಪರಿಸರದಲ್ಲಿ ವಾಮಾಚಾರ ಮಾಡುವವರು ಇದ್ದಾರೆಯೇ ಎನ್ನುವ ಬಗೆಗೂ ಅಧಿಕಾರಿಗಳು ತನಿಖೆ ಆರಂಭ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ಸೌಜನಿಯ ಸಂಬಂಧಿ ವಿಠಲ ಗೌಡ ಬಂಗ್ಲೆಗುಡ್ಡ ಸ್ಥಳ ಮಹಜರು ನಡೆದ ಬಳಿಕದ ಅಲ್ಲಿನ ದೃಶ್ಯಾವಳಿಗಳ ಬಗ್ಗೆ ವಿವರಿಸಿದ್ದರು. ಇದನ್ನು ಸಹ ಗಂಭೀರವಾಗಿ ತೆಗೆದುಕೊಂಡ ಅಧಿಕಾರಿಗಳು ವಾಮಾಚಾರಕ್ಕೆ ಸಂಬಂಧಿಸಿದ ಹಾಗೆಯೂ ತನಿಖೆ ನಡೆಸುತ್ತಿರುವುದಾಗಿದೆ.
ಇಲ್ಲಿ ನಡೆದಿರುವುದು ವಾಮಾಚಾರ ಎಂದು ಸಾಬೀತಾದ ಪಕ್ಷದಲ್ಲಿ ಪ್ರಕರಣ ಬೇರೊಂದು ತಿರುವು ಪಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
























