ಅ. 17: ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ

ಮಡಿಕೇರಿ: ಕಾವೇರಿ ನದಿ ಹುಟ್ಟಿದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ 17 ರಂದು ಮಧ್ಯಾಹ್ನ 1.44 ಕ್ಕೆ ತೀರ್ಥೋದ್ಭವ ನಡೆಯಲಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮಾಹಿತಿ ನೀಡಿದೆ.

ಅ. 17 ರಂದು ಮಧ್ಯಾಹ್ನದ ಮಕರ ಲಗ್ನ ಶುಭ ಮುಹೂರ್ತದಲ್ಲಿ ತೀರ್ಥ ರೂಪದಲ್ಲಿ ಕಾವೇರಿ ಮಾತೆ ಆಶೀರ್ವಾದ ನೀಡಲಿದ್ದಾಳೆ.

ಕಾವೇರಿ ಜಾತ್ರೆಗೆ ಸಂಬಂಧಿಸಿದಂತೆ ಸೆ. 26ರ ಬೆಳಗ್ಗೆ 9:31ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅಕ್ಟೋಬರ್ 4ರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ. 14ರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು ಮತ್ತು ಸಂಜೆ 4:45ಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸುವ ವಿಧಿ ವಿಧಾನಗಳು ನಡೆಯಲಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.





















































 
 
error: Content is protected !!
Scroll to Top