ಪುತ್ತೂರು ತಾಲೂಕು ಮುಖ್ಯಶಿಕ್ಷಕರ ಸಂಘದಿಂದ ನಿವೃತ್ತ ಶಿಕ್ಷಕಿ ಜುಲಿಯಾನ ವಾಸ್ ಉಪ್ಪಿನಂಗಡಿ ಮಠ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ವೀರಮಂಗಲ ಪಿ ಪಿಎಂಶ್ರೀ ಶಾಲಾ ಮುಖ್ಯಶಿಕ್ಷಕ ತಾರಾನಾಥ ಅವರಿಗೆ ಗುರುವಂದನೆ

ಪುತ್ತೂರು: ತಾಲೂಕು ಮುಖ್ಯ ಶಿಕ್ಷಕರ ಸಂಘದ ವತಿಯಿಂದ ನಿವೃತ್ತ ಶಿಕ್ಷಕಿ ಜುಲಿಯಾನ ವಾಸ್ ಉಪ್ಪಿನಂಗಡಿ ಮಠ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಶಿಕ್ಷಕ ತಾರಾನಾಥ ಪಿ. ಅವರಿಗೆ ಗುರುವಂದನೆ ಕಾರ್ಯಕ್ರಮ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೋಡಿಂಬಾಡಿ ವಹಿಸಿದ್ದರು. ಉಪ್ಪಿನಂಗಡಿ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಹನುಮಂತಯ್ಯ ಗೌರವ ಸನ್ಮಾನ ನೆರವೇರಿಸಿದರು. ಸನ್ಮಾನಿತರ ಕುರಿತು ಹಾರಾಡಿ ಮಾದರಿ ಶಾಲೆಯ ಮುಖ್ಯಶಿಕ್ಷಕ ಕುಕ್ಕ ಕೆ,  ಜಿಲ್ಲಾ ಸಂಘದ ಅಧ್ಯಕ್ಷ ಸವಣೂರು ಶಾಲೆ ಮುಖ್ಯ ಶಿಕ್ಷಕ ನಿಂಗರಾಜು, ಕೆಮ್ಮಾಯಿ ಶಾಲಾ ಮುಖ್ಯಶಿಕ್ಷಕಿ ಮರಿಯಮ್ಮ ಮಾತನಾಡಿದರು. ಮುಖ್ಯ ಶಿಕ್ಷಕರಾದ ಮಹೇಶ್ ರಾಮಕುಂಜ, ಆನಂದ ಅಜಿಲ ಕಡಬ, ಸಂತೋಷ  ಕೆಮ್ಮಿಂಜೆ, ಜಯಶ್ರೀ ಕೆಮ್ಮಾರ, ಜಯಂತಿ ಅರಿಯಡ್ಕ, ಶಶಿಕಲಾ ಪಾಪೆಮಜಲು, ಪುಷ್ಪಾ ಕೆ ಚಿಕ್ಕಮುಡ್ನೂರು, ಲಿಂಗಮ್ಮ ಇರ್ದೆ, ಯಶೋದಾ ಪುತ್ತೂರು, ನಿರ್ಮಲ ಸಾಲ್ಮರ,ಭವಾನಿ ಬಲ್ನಾಡು, ಜ್ಯೋತಿ ಕಕ್ಕೂರು,ಕಮಲಾ ಸರ್ವೆ, ಜಾನಕಿ ಪೇರಳ್ತಡ್ಕ, ವಿಶಾಲಾಕ್ಷಿ ಮಣಿಕ್ಕರ ಉಪಸ್ಥಿತರಿದ್ದರು.

ಕಬಕ ಶಾಲಾ ಮುಖ್ಯಶಿಕ್ಷಕ ಬಾಬು ಟಿ ಸ್ವಾಗತಿಸಿದರು. ಬಜತ್ತೂರು ಶಾಲಾ ಮುಖ್ಯಶಿಕ್ಷಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.





















































 
 

error: Content is protected !!
Scroll to Top