ತೆನ್ಕಾಯಿ ಮಲೆ ಕಿರುಚಿತ್ರದ ಹಾಡು, ಟ್ರೈಲರ್ ಬಿಡುಗಡೆ

ಪುತ್ತೂರು: ಅಕ್ಟೋಬರ್ 24ರಂದು ತೆರೆ ಕಾಣಲಿರುವ ಕನ್ನಡ ಕಿರುಚಿತ್ರ ತಿನ್ಕಾಯಿಮಲೆಯ ಹಾಡು ಮತ್ತು ಟ್ರೈಲರ್ ಸೆ.12ರಂದು ಪುತ್ತೂರಿನ ಜಿ.ಎಲ್. ಮಾಲ್ ನಲ್ಲಿ ಬಿಡುಗಡೆಗೊಂಡಿದೆ‌.

ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮನ್ಮಥ ಶೆಟ್ಟಿ, ಧರ್ಮ ಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪುತ್ತೂರು ವಲಯದ ಅಧ್ಯಕ್ಷ ರಘು ಶೆಟ್ಟಿ, ಸುಶಾಂತ್ ಮರೀಲು ಹಾಡು ಮತ್ತು ಟ್ರೈಲರ್ ವೀಕ್ಷಿಸಿ ಶುಭಹಾರೈಸಿದರು.

ಕಲಾಭಿಮಾನಿಗಳು ಹಾಗೂ ಚಿತ್ರ ತಂಡದ ಕಲಾವಿದರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.





















































 
 

ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಖ್ಯಾತ ನಟ ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಚಿತ್ರದ ಕುರಿತು ಮನದಾಳದ ಮಾತುಗಳನ್ನಾಡಿದರು. ನಿರ್ದೇಶಕ ರವಿಚಂದ್ರ ರೈ ಮುಂಡೂರು ಚಿತ್ರದ ಕುರಿತು ಮಾತಾನಾಡಿದರು.

ನಿವೃತ ದೈಹಿಕ ಶಿಕ್ಷಕ ಹಾಗೂ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ತೆನ್ಕಾಯಿ ಮಲೆ ಎಂಬ ಹೆಸರೇ ಆಕರ್ಷಕ. ಪ್ರಕೃತಿ ರಮಣೀಯ ದೃಶ್ಯ, ಮಳೆಯ ಹನಿಗಳ ಮೇಲಾಟ, ಯುವ ಮನಸ್ಸುಗಳ ಕನಸಿನಾಟ ಎಲ್ಲವನ್ನೂ ಸುಂದರವಾಗಿ ಸೆರೆಹಿಡಿದ ಚಿತ್ರತಂಡ ಕಲಾವಿದರಿಗೆ ಹಾರ್ದಿಕ ಶುಭಾಶಯಗಳು. ಯುವ ಕಲಾವಿದ ರವಿಚಂದ್ರ ಮುಂಡೂರು ಅವರ ಕನಸು ಚಿತ್ರ ರೂಪವಾಗಿ “ತೆನ್ಕಾಯಿಮಲೆ”ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಮುಂದೆ ದೊಡ್ಡ ಪರದೆಯಲ್ಲಿ ಮೂಡಿಬರುವ ಚಿತ್ರವಾಗಲೆಂದು ಸರ್ವ ದೈವದೇವರಲ್ಲಿ ಪ್ರಾರ್ಥಿಸೋಣ ಎಂದು ಶುಭಹಾರೈಸಿದರು.

ಈ ಹಾಡು Inspire Films YouTube ಚಾನೆಲ್ ನಲ್ಲಿ ಲಭ್ಯವಿದೆ ಎಂದು ಚಿತ್ರ ತಂಡ ತಿಳಿಸಿದೆ. ಕಾರ್ಯಕ್ರಮವನ್ನು ಚಿತ್ರದ ಕಲಾವಿದ ವಿಜೆ ವಿಖ್ಯಾತ್ ಹಾಗೂ ನಾಯಕಿ ಶ್ರೇಯಾ ಸುಳ್ಯ ನಿರೂಪಿಸಿದರು.

error: Content is protected !!
Scroll to Top