ಬ್ಯಾಂಕ್‌ಗಳಿಗೆ ವಂಚಿಸಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಭಾರತಕ್ಕೆ ಹಸ್ತಾಂತರ ಮಾಡಿದ ಕುವೈತ್

ನವದೆಹಲಿ: ಬ್ಯಾಂಕುಗಳಿಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಆರೋಪಿ ಮುನಾವರ್ ಖಾನ್ ಎಂಬ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಕುವೈತ್‌ನಿಂದ ಗಡೀಪಾರು ಮಾಡುವಲ್ಲಿ ಸಿಬಿಐ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಈತನ ವಿರುದ್ಧ 2022 ರಲ್ಲಿ ಚೆನ್ನೈ‌ನ ಸಿಬಿಐ ಸ್ಪೆಷಲ್ ಟಾಸ್ಕ್ ಬ್ರಾಂಚ್ ರೆಡ್ ಕಾರ್ನರ್ ನೊಟೀಸು ಜಾರಿ ಮಾಡುವಂತೆ ಇಂಟರ್ ಪೋಲ್‌ಗೆ ಮನವಿ ಸಲ್ಲಿಸಿತ್ತು. ಹೀಗಾಗಿ ಕುವೈತ್ ಅಧಿಕಾರಿಗಳ ಅನುಮತಿಯ ಬಳಿಕ ಆರೋಪಿಯನ್ನು ಸಿಬಿಐ ವಶಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈತನನ್ನು ಕುವೈತ್ ಪೊಲೀಸ್ ಬೆಂಗಾವಲಿನ ಜೊತೆಗೆ ಹೈದರಾಬಾದ್‌‌ನ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಅಲ್ಲಿಂದ ಸಿಬಿಐ ತನ್ನ ವಶಕ್ಕೆ ಪಡೆದಿರುವುದಾಗಿದೆ. ಕುವೈತ್ ನ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಮತ್ತು ಸಿಬಿಐ ನಡುವಿನ ಸತತ ಸಂಪರ್ಕದೊಂದಿಗೆ ಖಾನ್ ಇರುವಿಕೆಯನ್ನು ಪತ್ತೆ ಹಚ್ಚಲಾಗಿತ್ತು. ಬ್ಯಾಂಕ್ ಆಫ್ ಬರೋಡಾಗೆ ವಂಚನೆ ನಡೆಸಲು ಪಿತೂರಿ ನಡೆಸಿದ ಆರೋಪದಲ್ಲಿ ಖಾನ್ ವಿಚಾರಣೆ ಎದುರಿಸಿದ್ದ. ಪೊಲೀಸ್‌ ತನಿಖೆಯಲ್ಲಿ ಇದು ವಂಚನೆ ಪ್ರಕರಣ ಎಂದು ದಾಖಲಾಗುತ್ತಿದ್ದಂತೆಯೇ ಖಾನ್ ಗಲ್ಫ್ ರಾಷ್ಟ್ರಕ್ಕೆ ಪರಾರಿಯಾಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಖಾನ್ ನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಣೆ ಮಾಡಿತ್ತು.





















































 
 

error: Content is protected !!
Scroll to Top