ಪುತ್ತೂರು: 2001 ಸೆ.11 ರಂದು ನಡೆದ ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ದಿ| ಹೇಮಂತ ಕುಮಾರ್ ಅವರ 24ನೇ ಸಂಸ್ಮರಣಾ ಕಾರ್ಯಕ್ರಮ ಗುರುವಾರ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಫ ಮತ್ತು ದಿ| ಹೇಮಂತ ಕುಮಾರ್ ಸ್ಮಾರಕ ಸಮಿತಿ, ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಸಂಘದ ಹೇಮಂತ ಕುಮಾರ್ ಸಭಾಭವನದಲ್ಲಿ ಜರಗಿತು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಪೂಜೆ ನೇರವೇರಿಸಿ, ದೀಪ ಬೆಳಗಿಸಿ ಹೇಮಂತ ಕುಮಾರ್ ತೈಲಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೇಮಂತ ಕುಮಾರ್ ತಂದೆ ಪಿ ಆನಂದ ಟೈಲರ್, ತಾಯಿ ಪಿ ಕುಸುಮ, ಸಹೋದರ ಪ್ರಶಾಂತ್ ಕುಮಾರ್, ಶ್ವೇತಾ ಪ್ರಶಾಂತ್, ಶ್ರುಶಾಂತ್, ಶ್ರೀಯಾ ಪುಷ್ಪ ನಮನ ಸಲ್ಲಿಸಿದರು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ ಮಾತಾನಾಡಿ, ಹೇಮಂತ್ ಕುಮಾರ್ ನೆನಪು ಸದಾ ಕಾಲ ಸಂಘಕ್ಕಿದೆ ಹಾಗೂ ಆನಂದ್ ಟೈಲರ್ ಮನೆಯವರ ಕೊಡುಗೆ ಸಂಘಕ್ಕೆ ಅನನ್ಯವಾದುದು, ಆನಂದ್ ಟೈಲರ್ ಬಿಲ್ಲವ ಸಂಘಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್ ಸಿ ನಾರಾಯಣ ರೆಂಜ ಮಾತಾನಾಡಿ, ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ದಿ| ಹೇಮಂತ ಕುಮಾರ್ ಒರ್ವ ಪ್ರತಿಭಾನ್ವಿತ ಯುವಕ, ಸಮಾಜದ ಯುವಸಮಾಜಕ್ಕೆ ಪ್ರೇರಣಾದಾಯಿ. ಅವರ ನೆನಪಿನಲ್ಲಿ ನಮ್ಮ ಯುವಸಮಾಜ ಜಾಗೃತವಾಗಿ ಉನ್ನತ ಯಶಸ್ಸು ಸಾಧಿಸಬೇಕು. ಕಷ್ಟದ ಕಾಲದಲ್ಲೂ ಕುಟುಂಬ ಸಮಾಜದ ಪ್ರೀತಿ ತೋರಿಸಿದ್ದಾರೆ ಹಾಗೂ ಬಿಲ್ಲವ ಸಂಘ ಅವರ ಸಮಾಜಮುಖಿ ಚಿಂತನೆಯನ್ನು ಗೌರವಿಸುತ್ತದೆ ಎಂದರು.
ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಶೇಷಪ್ಪ ಬಂಗೇರ, ಸಂಘದ ಕಾರ್ಯದರ್ಶಿ ಮಹೇಶ್ಚಂದ್ರ ಸಾಲಿಯಾನ್, ಉಪಾಧ್ಯಕ್ಷರಾದ ಪುಷ್ಪಾವತಿ ಕೇಕುಡೆ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರಂಬೆಟ್ಟು, ಉದಯ ಕುಮಾರ್ ಕೋಲಾಡಿ, ಅವಿನಾಶ್ ಹಾರಾಡಿ, ಸಂಘದ ಮೇನೆಜರ್ ಪ್ರಕಾಶ್, ಮೋಹನ್ ತೆಂಕಿಲ, ಮೋಹನ್ ಕುಮಾರ್ ಬಿ ಯಂ, ಕರುಣಾಕರ ಬಿ.ಯಂ, ರವೀಂದ್ರ ಬಿ ಯಂ, ದಿನಕರ್ ಬಿ ಯಂ ಹಾಗೂ ಆನಂದ ಟೈಲರ್ ಕುಟುಂಬಸ್ಥರು ಮತ್ತು ಹಿತೈಷಿಗಳು ಉಪಸ್ಥಿತರಿದ್ದು ಪುಷ್ಪಾರ್ಚನೆ ನಡೆಸಿ ಗೌರವ ಶ್ರದ್ದಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ರಾಮಕೃಷ್ಣ ಆಶ್ರಮದ ಮಕ್ಕಳಿಗೆ ಅನ್ನಸಂತರ್ಪಣೆ ನಡೆಯಿತು.
























