ಶ್ರೀ ಕಾಳಿಕಾಂಬ ಯಕ್ಷಕಲಾ ಸೇವಾ ಟ್ರಸ್ಟಿನ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 95ನೇ ಕಾರ್ಯಕ್ರಮವಾಗಿ ಮಹಿಳಾ ಯಕ್ಷಕೂಟ ಕದ್ರಿಮಂಗಳೂರು ಬಳಗದಿಂದ ಎಲ್ಲೂರು ರಾಮಚಂದ್ರರಾವ್ ನಿರ್ದೇಶನದಲ್ಲಿ ಗದಾಯುದ್ಧ ತಾಳಮದ್ದಳೆ ಉಪ್ಪಿನಂಗಡಿ ರಾಮನಗರದ ಶಾರದಾ ಕಲಾಮಂಟಪದಲ್ಲಿ ಜರಗಿತು.

ಭಾಗವತರಾಗಿ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನರ್,ಕೃಷ್ಣರಾವ್, ಚಕ್ರತಾಳದಲ್ಲಿ ರಾಮಚಂದ್ರ ಎಲ್ಲೂರು ಅರ್ಥಧಾರಿಗಳಾಗಿ
ವನಿತಾ ಎಲ್ಲೂರು (ಕೌರವ 1) ರಂಜಿತಾ ಎಲ್ಲೂರು( ಕೌರವ 2) ವಿಶಾಲ ಕೇಶವ ಭಟ್ (ಭೀಮ) ಶೀಲಾ ಜಯಪ್ರಕಾಶ್ (ಅಶ್ವತ್ಥಾಮ) ರಮಾಮಣಿ ಭಟ್ (ಸಂಜಯ) ಸಂಧ್ಯಾ ಕುಂದೇಶ್ವರ (ಬೇಹಿನಚರ) ಭಾಗ್ಯಲಕ್ಷ್ಮಿ ಉಡುಪ (ಶ್ರೀ ಕೃಷ್ಣ) ದೀಪಾ ವಾಸುದೇವ ಭಟ್ (ಧರ್ಮರಾಯ ) ಭಾಗವಹಿಸಿದ್ದರು.
ಅತ್ಯುತ್ತಮವಾಗಿ ಪ್ರಸಂಗವನ್ನು ನಿರೂಪಿಸಿದ ತಂಡದ ಪ್ರದರ್ಶನದ ಬಗ್ಗೆ ಕಲಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.ಭಾರತೀಯ ಸೇನೆಯ ನಿವೃತ ಬಿಎಸ್ಎಫ್ ಕಮಾಂಡೆಂಟ್ ಚಂದಪ್ಪ ಮೂಲ್ಯ, ಉಮೇಶ ಶೆಣೈ ರಾಮನಗರ, ಉಪನ್ಯಾಸಕಿ ಭಾರತಿ ಎಂ.ಎಲ್, ಗೀತಾ ಕುದ್ದಣ್ಣಾಯ ತಂಡದ ಸದಸ್ಯರಿಗೆ ಪ್ರಶಂಸಾ ಪತ್ರ ವಿತರಿಸಿದರು. ತಂಡದ ಮುಖ್ಯಸ್ಥರಾದ ಎಲ್ಲೂರು ರಾಮಚಂದ್ರರಾವ್ ಅವರನ್ನು ಕಾಳಿಕಾಂಬ ಯಕ್ಷಕಲ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು.ಭಾಗವತ ಪದ್ಮನಾಭ ಕುಲಾಲ್ ಇಳಂತಿಲ ಕಾರ್ಯಕ್ರಮ ನಿರೂಪಿಸಿದರು.
























