ನಿರ್ದೇಶಕ, ನಟ ಎಸ್‌.ನಾರಾಯಣ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು

ಸೊಸೆಗೆ ವರದಕ್ಷಿಣೆ ತರಲು ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ ಆರೋಪ

ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ಎಸ್​. ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಾಗಿದೆ. ಸೊಸೆ ಪವಿತ್ರಾ ಅವರು ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ನೀಡಿದ್ದು, ಇದರನ್ವಯ ಎಫ್​ಐಆರ್ ದಾಖಲಾಗಿದೆ.

2021ರಲ್ಲಿ ಎಸ್.ನಾರಾಯಣ್​ ಅವರ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ನಡೆದಿತ್ತು. ನಾಲ್ಕು ವರ್ಷ ಕಳೆಯುವುದರೊಳಗೆ ಸಂಸಾರ ಹಳಿತಪ್ಪದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ನಾರಾಯಣ್ ಅವರ ಪತ್ನಿ ಭಾಗ್ಯವತಿ ಹಾಗೂ ಮಗ ಪವನ್ ವಿರುದ್ಧ ಪವಿತ್ರಾ ಮದುವೆಯಲ್ಲಿ ವರದಕ್ಷಿಣೆ ಕೊಟ್ಟರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದರೆ ಎಂದು ಪವಿತ್ರಾ ದೂರು ನೀಡಿದ್ದಾರೆ.





















































 
 

ಪವನ್​ಗೆ ಕೆಲಸ ಇಲ್ಲ. ಹೀಗಾಗಿ, ನಾನೇ ನೌಕರಿ ಮಾಡಿ ಮನೆ ನಡೆಸುತ್ತಿದ್ದೆ. ಈ ವೇಳೆ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಆರಂಭಿಸಲು ಹಣಕ್ಕೆ ಬೇಡಿಕೆ ಇಡಲಾಯಿತು. ಆಗ ನಾನು ತಾಯಿಯ ಒಡವೆಯನ್ನು ಅಡವಿಟ್ಟು ಹಣ ಕೊಟ್ಟಿದ್ದೆ. ಆದರೆ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯಿತು ಎಂದು ಪವಿತ್ರಾ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಪವಿತ್ರಾ ಅವರು ತಮ್ಮ ಹೆಸರಲ್ಲೇ 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್​ಗೆ ನೀಡಿದ್ದರಂತೆ. ಆದರೆ ಈಗ ಪವಿತ್ರಾ ಅವರನ್ನೇ ಎಸ್‌.ನಾರಾಯಣ್‌ ಮನೆಯಿಂದ ಹೊರಹಾಕಿದ್ದಾರಂತೆ.

ದೂರಿಗೆ ಸ್ಪಷ್ಟೀಕರಣ ನೀಡಿರುವ ಎಸ್‌ ನಾರಾಯಣ್‌, ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವಕ್ಕೂ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ ಎಂದಿದ್ದಾರೆ.

error: Content is protected !!
Scroll to Top