ಅಕ್ಷಯ  ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರು ಪುರಸ್ಕಾರ

ಪುತ್ತೂರು:  ಅಕ್ಷಯ ಎಜುಕೇಶನಲ್  ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಯಲ್ಲಿ    ಶಿಕ್ಷಕರ      ದಿನಾಚರಣೆ ಯನ್ನು  ಬಹಳ  ಸಂಭ್ರಮದಿಂದ  ಆಚರಿಸಲಾಯಿತು.     ಕಾರ್ಯಕ್ರಮವನ್ನು ಹಿರಿಯ  ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಿವೃತ್ತ  ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಹರಿಣಾಕ್ಷ  . ಕೆ      ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಶಿಕ್ಷಕರಿಗೆ ಶುಭ ಹಾರೈಸಿದರು.

 ಅಕ್ಷಯ  ಗುರು  ಪುರಸ್ಕಾರ ವನ್ನು   ಸ್ವೀಕರಿಸಿದ    ಡಾ.  ನರೇಂದ್ರ ರೈ ದೇರ್ಲ ,ನಿವೃತ್ತ  ಪ್ರಾಧ್ಯಾಪಕರು   ಸರಕಾರಿ ಪ್ರಥಮ ದರ್ಜೆ  ಮಹಿಳಾ ಕಾಲೇಜು ಪುತ್ತೂರು: ದೇಶದ  ಯಾವುದೇ  ಉನ್ನತ  ಪದವಿ   ಪಡೆದು  ನಿರ್ಗಮಿಸಿದ  ನಂತರ  ಮಾಜಿ  ಎಂಬ  ಅಂಕಿತ  ದೊಂದಿಗೆ   ಪ್ರಚಲಿತ  ನಾಗುವನು  ಆದರೆ  ಶಿಕ್ಷಕನಿಗೆ     ಜೀವನ    ಪರ್ಯಂತವಾಗಿ  ಶಿಕ್ಷಕ ಎಂಬ  ಬಿರುದು   ಅಮರವಾಗಿರುತ್ತದೆ.  ವಿದ್ಯಾರ್ಥಿಗಳು   ಸುಸಂಸ್ಕೃತ ಜೀವನ   ಮೈಗೂಡಿಸಿಕೊಂಡರೆ  ಮಾತ್ರ   ನಮ್ಮ ಜೀವನ   ಅರ್ಥಪೂರ್ಣವಾಗುತ್ತದೆ.     ಈ ನಿಟ್ಟಿನಲ್ಲಿ ಅಕ್ಷಯ   ಕಾಲೇಜಿನ   ವಿದ್ಯಾರ್ಥಿಗಳ    ಸಂಸ್ಕೃತಿ, ಕಲೆ  ಸಾಹಿತ್ಯದ ಅಭಿರುಚಿ ಶ್ಲಾಘನೀಯ ಎಂದರು.     

 “ಅಕ್ಷಯ  ಸಾಧಕ   ಪುರಸ್ಕಾರ     ಸ್ವೀಕರಿಸಿದ   ಡಾ  ರವಿ  ಕಕ್ಕೆಪದವು   ಅಧ್ಯಕ್ಷರು   ಸಮಾಜ ಸೇವಾ  ಟ್ರಸ್ಟ್   ಸುಬ್ರಹ್ಮಣ್ಯ:ತಮ್ಮ  ಜೀವನದ   ಸಾರ್ಥಕ  ಮತ್ತು ಸಾಧನೆಯ  ಬದುಕಿನ   ನೈಜ ಚಿತ್ರಣವನ್ನು  ಹಂಚಿಕೊಳ್ಳುವುದರ ಮೂಲಕ  ವಿದ್ಯಾರ್ಥಿಗಳಿಗೆ  ಪ್ರೇರಣೆ ನೀಡಿದರು.  ಜೀವನದಲ್ಲಿ   ಸುಸಂಸ್ಕೃತ      ಮೌಲ್ಯಗಳನ್ನು       ಮೈಗೂಡಿಸಿಕೊಂಡು  ನಮ್ಮ  ಗುರಿ  ಸದಾ    ಯಶಸ್ವಿನ  ಕಡೆಗಿರಬೇಕು  ಎಂದು ಮಾರ್ಗದರ್ಶನ  ನೀಡಿದರು. 





















































 
 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು   ವಹಿಸಿದ್ದ ಕಾಲೇಜಿನ  ಆಡಳಿತ ಮಂಡಳಿಯ ಅಧ್ಯಕ್ಷರಾದ      ಶ್ರೀಯುತ ಜಯಂತ್   ನಡುಬೈಲ್ , ಜೀವನದಲ್ಲಿ   ತಂದೆ ತಾಯಿ ಮತ್ತು   ವಿದ್ಯೆ ಕಲಿಸಿದ ಗುರು   ಮಕ್ಕಳ   ಭವಿಷ್ಯ ಕ್ಕೆ    ಬೆಳಕನ್ನು  ನೀಡುವ    ಶ್ರೇಷ್ಠ ವಾದ  ವ್ಯಕ್ತಿ ಗಳು.          ವಿದ್ಯಾರ್ಥಿಗಳಿಗೆ   ಮೌಲ್ಯಧಾರಿತ      ಶಿಕ್ಷಣ  ನೀಡುವಲ್ಲಿ   ನಮ್ಮ  ಸಂಸ್ಥೆ      ಕಾರ್ಯ ಪ್ರವೃತ್ತವಾಗಿದೆ  ಎಂದರು.

ಸಮಾರಂಭದಲ್ಲಿ   ಸಂಸ್ಥೆಯ   ಎಲ್ಲಾ ಶಿಕ್ಷಕರನ್ನು ಮತ್ತು ಬೋಧಕೇತರ  ಸಿಬ್ಬಂದಿ ವರ್ಗದವರನ್ನು  ಗೌರವಿಸಲಾಯಿತು.

ಪ್ರಾಂಶುಪಾಲರಾದ      ಶ್ರೀ ಸಂಪತ್ ಕೆ ಪಕ್ಕಳ  ಪ್ರಾಸ್ತಾವಿಕವಾಗಿ   ಮಾತನಾಡಿದರು.ಆಡಳಿತ  ಮಂಡಳಿಯ  ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್ , ಆಡಳಿತಾಧಿಕಾರಿ ಶ್ರೀ ಅರ್ಪಿತ್  ಟಿ ಆರ್, ಕಾರ್ಯಕ್ರಮದ     ಸಂಯೋಜಕಿ  ಶ್ರೀಮತಿ    ದೀಕ್ಷ  ರೈ   ,  ಆಂತರಿಕ ಗುಣಮಟ್ಟ ದ ಭರವಸೆಯ  ಕೋಶ ದ  ಸಂಯೋಜಕಿ  ಶ್ರೀಮತಿ ರಶ್ಮಿ ಕೆ, ವಿದ್ಯಾರ್ಥಿ  ಒಕ್ಕೂಟದ  ನಾಯಕ ರಾಕೇಶ್ .ಕೆ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ  ಗಂಗಾ ರತ್ನ    ಸ್ವಾಗತಿಸಿ , ವಿದ್ಯಾರ್ಥಿ ಒಕ್ಕೂಟದ  ಖಜಾಂಚಿ    ಪೃಥ್ವಿರಾಜ್  ವಂದಿಸಿದರು.ಕುಮಾರಿ ಪ್ರಕೃತಿ ಪ್ರಾರ್ಥನೆ   ಹಾಡಿದರು. ಕನ್ನಡ ವಿಭಾಗದ ಉಪನ್ಯಾಸಕ ಶ್ರೀ ಹರಿಶ್ಚಂದ್ರ ಕಾರ್ಯಕ್ರಮ ವನ್ನು ನಿರೂಪಿಸಿದರು.

ಅಕ್ಷಯ ಗುರು ಸನ್ಮಾನ:

 ಅಕ್ಷಯ ಕಾಲೇಜಿನ  ವಿದ್ಯಾರ್ಥಿಗಳ  ಪೋಷಕ  ಶಿಕ್ಷಕರನ್ನು   ಸನ್ಮಾನಿಸಲಾಯಿತು.  ಶ್ರೀ  ರಾಧಾಕೃಷ್ಣ  ಹೊಳ್ಳ. ಬಿ  ಶ್ರೀ  ಸತ್ಯ ಸಾಯಿ  ಲೋಕಾ ಸೇವಾ  ವಿದ್ಯಾ ಕೇಂದ್ರ    ಅಳಿಕೆ  , ಶ್ರೀಮತಿ  ಸವಿತಾ  ಶೆಟ್ಟಿ   ಕುನಿಲ್  ವಿದ್ಯಾ ಸಂಸ್ಥೆ   ಬದಿಯಡ್ಕ,         ಶ್ರೀಮತಿ    ಭುವನೇಶ್ವರಿ ಅಂಗನವಾಡಿ  ಕೇಂದ್ರ   ಕಡೆಶೀವಾಲಯ   ಚೆನ್ನಯ   ಕಟ್ಟೆ   , ಶ್ರೀಮತಿ  ಚೇತನಾ   ವಿಠಲ  ಪದವಿ ಪೂರ್ವ ಕಾಲೇಜು   ವಿಟ್ಲ, ಶ್ರೀಮತಿ  ಮೀನಾಕ್ಷಿ  ಎಸ್     ದಡ್ಡಲ್ತಡ್ಕ  ಅಂಗನವಾಡಿ ಕೇಂದ್ರ  ವಿಟ್ಲ ಮುಡ್ನೂರು,ಶ್ರೀಮತಿ  ಜಯಶ್ರೀ  ಎಂ      ದಡ್ಡಲ್ತಡ್ಕ  ಅಂಗನವಾಡಿ ಕೇಂದ್ರ  ವಿಟ್ಲ ಮುಡ್ನೂರು ಅಭಿನಂದನೆಯನ್ನು ಸ್ವೀಕರಿಸಿದರು.

error: Content is protected !!
Scroll to Top